ಚಿನ್ನಾಭರಣ ಪ್ರಿಯರಿಗೆ ಒಂದಷ್ಟು ನೆಮ್ಮದಿ ನೀಡುತ್ತೆ ಈ ಸುದ್ದಿ….!

ಚಿನ್ನದ ಬೆಲೆ ನಿರಂತರವಾಗಿ ಏರಿಳಿತವಾಗುತ್ತಲೇ ಇದೆ. ಆಭರಣ ಪ್ರಿಯರಿಗೆ ಸಮಾಧಾನಕರ ಸಂಗತಿಯೆಂದರೆ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ  ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ – ಬೆಳ್ಳಿ ಬೆಲೆ ಇಳಿಮುಖ ಮಾಡಿದೆ.

ಮಲ್ಟಿ ಕಮೊಡಿಟಿ ಎಕ್ಸ್ ಚೇಂಜ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 59,750 ರೂಪಾಯಿ ಮಟ್ಟದಲ್ಲಿ ವಹಿವಾಟು ನಡೆಸಿದೆ. ನಿನ್ನೆ ವಹಿವಾಟು ಅಂತ್ಯಕ್ಕೆ ಬೆಲೆ 10 ಗ್ರಾಂಗೆ 59763 ರೂಪಾಯಿ ಆಗಿತ್ತು.

ಎಂಸಿಎಕ್ಸ್‌ನಲ್ಲಿ ಬೆಳ್ಳಿಯ ಬೆಲೆಯು ಶೇಕಡಾ 0.09 ರಷ್ಟು ಕುಸಿದು ಪ್ರತಿ ಕೆಜಿಗೆ 76031 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಯನ್ನು ತೋರಿಸುತ್ತಿದೆ. ಚಿನ್ನದ ಬೆಲೆ ಸ್ವಲ್ಪ ದುರ್ಬಲತೆಯೊಂದಿಗೆ ಪ್ರತಿ ಔನ್ಸ್‌ಗೆ 1979 ಡಾಲರ್‌ ಮಟ್ಟದಲ್ಲಿದೆ. ಬೆಳ್ಳಿಯ ಬೆಲೆಯಲ್ಲಿ ಹೆಚ್ಚು ಏರಿಳಿತಗಳಾಗಿಲ್ಲ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55, 280 ರೂಪಾಯಿ ಇದ್ದು, 24 ಕ್ಯಾರೆಟ್ ಬೆಲೆ 10 ಗ್ರಾಂಗೆ 60, 280 ರೂಪಾಯಿ ಆಗಿದೆ.

ನೋಯ್ಡಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55,208 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 60,280 ರೂಪಾಯಿ ಇದೆ. ಪಾಟ್ನಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ.55,130 ಮತ್ತು 24 ಕ್ಯಾರೆಟ್ ಬೆಲೆ 10 ಗ್ರಾಂಗೆ ರೂ.60,130 ಮಟ್ಟದಲ್ಲಿದೆ. ಇದಲ್ಲದೇ ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,100, ಕೋಲ್ಕತ್ತಾ ರೂ.55,100, ಲಕ್ನೋದಲ್ಲಿ 55,280 ರೂಪಾಯಿ ಇದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read