alex Certify ಗುಂಡಿಕ್ಕಿ ಮಾವನನ್ನೇ ಕೊಂದ ಸೊಸೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಡಿಕ್ಕಿ ಮಾವನನ್ನೇ ಕೊಂದ ಸೊಸೆ….!

ತನ್ನ ಮಾವನೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ ಸೊಸೆಯೊಬ್ಬಳು ಕೋಪದ ಭರದಲ್ಲಿ ಆತನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಿಕ್ಕರಳ್ಳಿ ಗ್ರಾಮದಲ್ಲಿ ನಡೆದಿದೆ.

73 ವರ್ಷದ ಕೃಷಿಕ ಕೆ.ಎ. ಮಂದಣ್ಣ ಮೃತಪಟ್ಟವರಾಗಿದ್ದು ಅವರನ್ನು ಸೊಸೆ ನೀಲಮ್ಮ (ಜ್ಯೋತಿ) ತಮ್ಮ ಪತಿ ಕೆ.ಎಂ. ನಾಣಯ್ಯ ಅವರ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ನಾಣಯ್ಯ ಹೊರ ಹೋಗಿದ್ದ ಸಂದರ್ಭದಲ್ಲಿ ಮಾವ – ಸೊಸೆಗೆ ಜಗಳ ಆರಂಭವಾಗಿದೆ. ಆಗ ಜ್ಯೋತಿ ಕೋವಿಯಿಂದ ಗುಂಡು ಹಾರಿಸಿ ಮಂದಣ್ಣ ಅವರ ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...