ಮನುಷ್ಯನ ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕಷ್ಟಗಳು ಪದೇ ಪದೇ ಎದುರಾಗುತ್ತಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಮನುಷ್ಯನು ತಾನು ದುಡಿದ ಹಣ ಸಾಲದೆ ಸಾಲ ಮಾಡುತ್ತಾನೆ. ಆದರೆ ಕೊನೆಗೆ ಅದನ್ನು ತೀರಿಸಲಾಗದೆ ಪರದಾಡುತ್ತಾ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹಾಗಾಗಿ ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಗಣೇಶ ಮಂತ್ರವನ್ನು ಪಠಿಸಿ.
ಗಣೇಶನನ್ನು ಋಣವಿಮೋಚಕ ಎಂದು ಕರೆಯುತ್ತಾರೆ. ಹಾಗಾಗಿ ಬುಧವಾರದಂದು ಗಣೇಶನಿಗೆ ಹೂವಿನಿಂದ ಅಲಂಕಾರ ಮಾಡಿ ದೀಪಕ್ಕೆ 5 ಬತ್ತಿಗಳನ್ನು ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪ ಬೆಳಗಿಸಿ ಕೊಬ್ಬರಿಯನ್ನು ಗಣೇಶನಿಗೆ ಅರ್ಪಿಸಬೇಕು. ಬಳಿಕ “ ಓಂ ಗಂ ಗಣಪತ್ತ್ಯೇ ಋಣಹರ್ತಾಯ್ಯೇ ನಮಃ” ಗಣೇಶ ಈ ಮಂತ್ರವನ್ನು 9 ಬಾರಿ ಪಠಿಸಿ.
ಇದನ್ನು ಬುಧವಾರದಿಂದ ಶುರು ಮಾಡಿ 18 ದಿನಗಳ ಕಾಲ ಪಠಿಸಿ. ಬಳಿಕ 19ನೇ ದಿನ ಗಣೇಶನ ದೇವಾಲಯಕ್ಕೆ ಹೋಗಿ ಸಿಹಿಯನ್ನು ಹಂಚಬೇಕು. ಇದರಿಂದ ಸಾಲ ತೀರಿಸಲು ಗಣೇಶ ನಿಮಗೆ ದಾರಿ ತೋರಿಸುತ್ತಾನಂತೆ.