ಕೊಹ್ಲಿಯ ಸಂಭ್ರಮಾಚರಣೆ ಅನುಕರಿಸಿದ ಅನುಷ್ಕಾ; ವಿಡಿಯೋ ವೈರಲ್

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ಈವೆಂಟ್‌ನಲ್ಲಿ ತಮ್ಮ ಹಾಸ್ಯದ ಮೂಲಕ ಅಭಿಮಾನಿಗಳ ಗಮನ ಸೆಳೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಕೊಹ್ಲಿ ಮತ್ತು ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಟ ಆಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ರು. ಅವರ ಸಂಭಾಷಣೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಚಾಟ್ ಶೋ ಸೆಗ್‌ಮೆಂಟ್‌ನಲ್ಲಿ, ಕೊಹ್ಲಿಗೆ ಅನುಷ್ಕಾ ತಮಾಷೆಯಾಗಿ ಸವಾಲೆಸೆದರು. ಹಾಸ್ಯಮಯವಾಗಿ ಇಂದು ಏಪ್ರಿಲ್ 24, ಕನಿಷ್ಠ ರನ್ ಗಳಿಸಿ, ಕೊಹ್ಲಿ ಎಂದು ಹೇಳಿದ್ರು. ಇದಕ್ಕೆ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕೊಹ್ಲಿಯ ಮಾತಿಗೆ ನೆರೆದಿದ್ದವರ ನಕ್ಕು ನಕ್ಕು ಸುಸ್ತಾದ್ರು. ಏಪ್ರಿಲ್, ಮೇ, ಜೂನ್ ಮತ್ತು ಜುಲೈನಲ್ಲಿ ನಿಮ್ಮ ತಂಡದ ಎಲ್ಲಾ ಒಟ್ಟು ಸ್ಕೋರ್‌ಗಳಿಗಿಂತ ನಾನು ಹೆಚ್ಚು ಪಂದ್ಯಗಳನ್ನು ಹೊಂದಿದ್ದೇನೆ ಎಂದು ಹೇಳಿದ್ರು.

ವಿಕೆಟ್ ಪಡೆದ ನಂತರ ವಿರಾಟ್ ಕೊಹ್ಲಿಯು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ಪತ್ನಿ ಅನುಷ್ಕಾ ಶರ್ಮಾ ತಮಾಷೆಯಾಗಿ ಅನುಕರಿಸಿದ್ರು. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕೊಹ್ಲಿ, ವಿಕೆಟ್ ಬಿದ್ದಾಗಲೆಲ್ಲ ಅವರ ಉತ್ಸಾಹಭರಿತ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದಾರೆ. ಅನುಷ್ಕಾ, ಕೊಹ್ಲಿ ಯಾವೆಲ್ಲಾ ರೀತಿಯಾಗಿ ಸಂಭ್ರಮಿಸುತ್ತಾರೆ ಎಂಬುದನ್ನು ಅನುಕರಿಸಿದ್ರು. ಅನುಷ್ಕಾರ ಅನುಕರಣೆಗೆ ನೆರೆದಿದ್ದವರು ನಗೆಗಡಲಲ್ಲಿ ತೇಲಿದ್ರು. ಸದ್ಯ, ಈ ಕಾರ್ಯಕ್ರಮದ ವಿಡಿಯೋ ಭಾರಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read