ಕೂದಲುದುರುವ ಸಮಸ್ಯೆ ಇದೀಗ ಎಲ್ಲರಲ್ಲೂ ಕಂಡುಬರುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಹಲವರು ಹಲವಾರು ರೀತಿಯ ಔಷಧಿಗಳನ್ನು, ಮನೆಮದ್ದುಗಳನ್ನು ಬಳಸುತ್ತಾರೆ. ಅಂದಹಾಗೇ ಕೆಲವು ಯೋಗಗಳನ್ನು ಮಾಡುವುದರ ಮೂಲಕ ಕೂಡ ಕೂದಲುದುರುವ ಸಮಸ್ಯೆಯನ್ನು ನಿವಾರಿಸಬಹುದು.
*ಸರ್ವಂಗಾಸನ : ಇದು ದೇಹದಲ್ಲಿರುವ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಇದು ಬೋಳಾದ ತಲೆಯಲ್ಲಿ ಕೂದಲು ಬೆಳೆಯಲು ಸಹಕಾರಿಯಾಗಿದೆ. ಈ ಯೋಗಾಸನದಲ್ಲಿ ತಲೆ ಕೆಳಮುಖವಾಗಿರುವುದರಿಂದ ನೆತ್ತಿಗೆ ರಕ್ತ ಸಂಚಾರವಾಗಿ ಕೂದಲು ಹುಟ್ಟಲು ಸಹಾಯ ಮಾಡುತ್ತದೆ.
*ಸಿರ್ಸಾಸನ : ಇದರಲ್ಲಿ ಕೂಡ ತಲೆ ಕೆಳಮುಖವಾಗಿರುವುದರಿಂದ ನೆತ್ತಿಗೆ ರಕ್ತದ ಹರಿವು ಸರಾಗವಾಗುತ್ತದೆ. ಇದು ಕೂದಲು ಹುಟ್ಟಲು ಸಹಾಯ ಮಾಡುತ್ತದೆ. ಈ ಯೋಗವು ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗೇ ಕೂದಲುದುರುವುದನ್ನು ತಡೆಯಲು ಕೂಡ ಇದು ಪರಿಣಾಮಕಾರಿಯಾಗಿದೆ.