ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಂದು ವಸ್ತುಗಳನ್ನು ಇಡುವ ಸ್ಥಳ ಹಾಗೂ ಮನೆಗೆ ತರುವ ಸಮಯ ಕೂಡ ಮಹತ್ವದ ಪಾತ್ರ ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕಾರಂಜಿ ಇರುತ್ತದೆ. ಈ ಕಾರಂಜಿ ಹಾಗೂ ಮನೆಯಲ್ಲಿರುವ ಅನೇಕ ವಸ್ತುಗಳು ನಮ್ಮ ಮನೆಯ ಚಿತ್ರಣವನ್ನೇ ಬದಲಾಯಿಸುತ್ತವೆ.
ಕೆಲವರ ಮನೆಯಲ್ಲಿ ದೊಡ್ಡ ಕಾರಂಜಿಯನ್ನು ಇಡಲಾಗುತ್ತದೆ. ಮತ್ತೆ ಕೆಲವರ ಮನೆಯಲ್ಲಿ ಕಾರಂಜಿಯನ್ನು ಮಾರುಕಟ್ಟೆಯಿಂದ ತರುತ್ತಾರೆ. ತಂದ ಅಥವಾ ಮಾಡಿಸಿದ ಕಾರಂಜಿಯನ್ನು ವಾಸ್ತು ಪ್ರಕಾರವೇ ಅಳವಡಿಸಬೇಕು. ಇಲ್ಲವಾದ್ರೆ ಮನೆ ಶಾಂತಿಯನ್ನು ಶೋಗಾಗಿ ಇಡುವ ಕಾರಂಜಿ ಹಾಳು ಮಾಡುತ್ತದೆ.
ಕಾರಂಜಿ ಅಥವ ಕೊಳ ಯಾವಾಗ್ಲೂ ಮನೆಯ ಈಶಾನ್ಯ ಭಾಗದಲ್ಲಿರಬೇಕು. ಕಾರಂಜಿಯಲ್ಲಿ ಹರಿಯುವ ನೀರು ಎಂದೂ ಮನೆಯ ಹೊರಗೆ ಹೋಗುವಂತಿರಬಾರದು.
ಬಿದಿರಿನ ಸಸ್ಯಗಳು ಮನೆಯಲ್ಲಿದ್ದರೆ ಆರೋಗ್ಯ ವೃದ್ಧಿಯಾಗುತ್ತದೆ. ಇದು ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು.
ಮನೆಯಲ್ಲಿ ಎಂದೂ ಜಗಳ, ಯುದ್ಧ, ಗಲಾಟೆಯ ಫೋಟೋಗಳನ್ನು ಹಾಕಬೇಡಿ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ನೀರು, ಜಲಪಾತ, ನದಿಯ ಚಿತ್ರಗಳನ್ನು ಹಾಕುವುದಾದರೆ ಉತ್ತರ ದಿಕ್ಕಿಗೆ ಹಾಕಿ.
ದಾಂಪತ್ಯ ಜೀವನ ಸುಧಾರಿಸಲು ಲವ್ ಬರ್ಡ್ ಫೋಟೋ ಹಾಕಿ. ಇದು ಮನೆಯಲ್ಲಿ ಪ್ರೀತಿ ಹೆಚ್ಚಿಸುತ್ತದೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದಾದಲ್ಲಿ ಮನೆಯ ಪೂರ್ವ ದಿಕ್ಕಿಗೆ ಮಣ್ಣಿನ ಮಡಿಕೆಯಲ್ಲಿ ಉಪ್ಪನ್ನು ಇಡಿ. ನೆನಪಿರಲಿ ಪ್ರತಿ ಇಪ್ಪತ್ನಾಲ್ಕು ಗಂಟೆಗೆ ಉಪ್ಪನ್ನು ಬದಲಾಯಿಸುತ್ತಿರಿ.