ನಿಮಗೂ ಬೆಳಿಗ್ಗೆ ಎದ್ದಾಕ್ಷಣ ಕಾಫಿ ಅಥವಾ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸವಿದೆಯೇ. ಹಾಗಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಕಾಫಿ ಸೇವನೆಯಿಂದ ಎಷ್ಟೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ?
ಕಾಫಿಯಲ್ಲಿ ಕೆಫೀನ್ ಅಂಶ ಇದ್ದು ನಿಮಗೇ ಅರಿವಿಲ್ಲದಂತೆ ನಿಮ್ಮ ಸಿಟ್ಟು ಹಾಗೂ ಕಿರಿಕಿರಿಯನ್ನು ಹೆಚ್ಚಿಸುತ್ತದೆ ಎಂದಿದೆ ಇತ್ತೀಚಿನ ಅಧ್ಯಯನ. ತಾತ್ಕಾಲಿಕವಾಗಿ ಅದು ನಿಮ್ಮ ಮೆದುಳಿಗೆ ಶಕ್ತಿ ನೀಡಿ, ನಿಮಗೆ ಬಲ ನೀಡಿದ ಅನುಭವ ಕೊಟ್ಟರೂ ಅದರಿಂದಾಗುವ ಅಡ್ಡ ಪರಿಣಾಮಗಳೇ ಹೆಚ್ಚು ಎನ್ನಲಾಗಿದೆ.
ಕಾಫಿ ಕುಡಿಯುವುದು ನಿಮಗೆ ಅನಿವಾರ್ಯವಾಗಿದ್ದರೆ ಅದರ ಪ್ರಮಾಣವನ್ನು ಕಡಿಮೆ ಮಾಡಿ. ದಿನಕ್ಕೆ ಮೂರು ಸಲ ಕುಡಿಯುವವರಾದರೆ ಅದನ್ನು ಒಂದೇ ಬಾರಿಗೆ ಇಳಿಸಲು ಪ್ರಯತ್ನಿಸಿ. ಅದರೊಂದಿಗೆ ಹೆಚ್ಚು ನೀರು ಕುಡಿಯುವುದರ ಮೂಲಕ ಕಾಫಿಯ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಗಿಡಮೂಲಿಕೆಗಳಿಂದ ತಯಾರಾದ ಚಹಾಕ್ಕೆ ನಿಮ್ಮನ್ನು ಒಗ್ಗಿಕೊಳ್ಳುವಂತೆ ಮಾಡಿ. ಇದರಲ್ಲಿ ಕೆಫೀನ್ ಅಂಶಗಳೂ ಇಲ್ಲ. ತರಕಾರಿ, ಹಣ್ಣು, ಸೊಪ್ಪುಗಳನ್ನು ಧಾರಾಳವಾಗಿ ಸೇವಿಸಿ. ಜ್ಯೂಸ್ ಕುಡಿಯಿರಿ.
ಮಾಂಸ, ಸಕ್ಕರೆ ಮತ್ತು ಮೈದಾ ಪ್ರಮಾಣವನ್ನು ಕ್ರಮೇಣ ಕಡಿಮ ಮಾಡುತ್ತಾ ಬನ್ನಿ, ಖನಿಜಗಳು ಹೇರಳವಾಗಿರುವ ಧಾನ್ಯಗಳನ್ನು ಸೇವಿಸಿ.