‘ಫೋರ್ಬ್ಸ್’ ನಿಯತಕಾಲಿಕೆ ವಿಶ್ವದ ಅತಿ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ 234.3 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಭಾರತದ ಮುಕೇಶ್ ಅಂಬಾನಿ 89.3 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಈ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿರುವ LVMH ಕಂಪನಿ ಮುಖ್ಯಸ್ಥ ಬರ್ನಾಲ್ಡ್ ಅರ್ನಾಲ್ಟ್ ಹಾಗೂ ಕುಟುಂಬ 223.8 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದು, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ 152 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ನಾಲ್ಕನೇ ಸ್ಥಾನದಲ್ಲಿರುವ ಒರಾಕಲ್ ಕಂಪನಿಯ ಲ್ಯಾರಿ ಎಲಿಸನ್ 148.6 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದು, ಐದನೇ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್ ಒಡೆಯ ಬಿಲ್ ಗೇಟ್ಸ್ 117.3 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಇನ್ನು ಬರ್ಕ್ ಶೈರ್ ಹಾಥ್ ವೇ ನ ವಾರೆನ್ ಬಫೆಟ್ 112.4 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಆರನೇ ಸ್ಥಾನ, ಗೂಗಲ್ ನ ಲ್ಯಾರಿ ಪೇಜ್ 104 ಶತ ಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಏಳನೇ ಸ್ಥಾನ, ಮೈಕ್ರೋಸಾಫ್ಟ್ ಸ್ಟೀವ್ ಬಾಮರ್ 102.6 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಎಂಟನೇ ಸ್ಥಾನ, ಫೇಸ್ಬುಕ್ಕಿನ ಮಾರ್ಕ್ ಝುಕರ್ ಬರ್ಗ್ 102.4 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಒಂಬತ್ತನೇ ಸ್ಥಾನ ಹಾಗೂ ಟೆಲಿಕಾಂ ನ ಕಾರ್ಲೋಸ್ ಸ್ಲಿಮ್ ಹಿಲು 99.7 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.