ಆರ್ಥಿಕ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನೀವು ಬಯಸಿದ್ದರೆ ನಿಮ್ಮ ಮನೆಯ ಟ್ಯಾಪ್ ಬಗ್ಗೆ ಗಮನ ನೀಡಿ. ನಿಮ್ಮ ಮನೆಯ ಯಾವುದಾದ್ರೂ ಟ್ಯಾಪ್ ನಲ್ಲಿ ಬಂದ್ ಮಾಡಿದ ನಂತ್ರವೂ ನೀರು ಬರ್ತಿದ್ದರೆ ಅಥವಾ ಟ್ಯಾಪ್ ಸರಿಯಾಗಿ ಬಂದ್ ಆಗುತ್ತಿಲ್ಲವೆಂದಾದ್ರೆ ಮುಂದೆ ದೊಡ್ಡ ಸಮಸ್ಯೆ ಕಾದಿದೆ ಎಂದೇ ಅರ್ಥ.
ಅಡುಗೆ ಮನೆ, ಬಾತ್ ರೂಂ ಅಥವಾ ಮನೆಯ ಯಾವುದೇ ಜಾಗದಲ್ಲಿರುವ ಟ್ಯಾಪ್ ನಲ್ಲಿ ನೀರು ಜಿನುಗುತ್ತಿದೆ ಎಂದಾದಲ್ಲಿ ವಾಸ್ತು ಪ್ರಕಾರ ಅದು ಅಶುಭ. ವಾಸ್ತು ಹಾಗೂ ಫೆಂಗ್ ಶೂಯಿ ಪ್ರಕಾರ ಮನೆಯ ಯಾವುದೇ ಟ್ಯಾಪ್ನಲ್ಲಿ ವ್ಯರ್ಥವಾಗಿ ನೀರು ಬರುತ್ತಿದ್ದರೆ ಅದ್ರಿಂದ ಖರ್ಚು ಹೆಚ್ಚಾಗಲಿದೆ ಎಂದೇ ಅರ್ಥ.
ಬಡತನಕ್ಕೆ ನೂಕಲಿದೆ. ಅಡುಗೆ ಮನೆಯಲ್ಲಿ ಅಗ್ನಿ ವಾಸವಾಗಿರುತ್ತಾನೆ. ಬೆಂಕಿ ಹಾಗೂ ನೀರು ಒಟ್ಟಿಗೆ ಇದ್ದರೆ ರೋಗ, ಸಮಸ್ಯೆ ಹಾಗೂ ವ್ಯರ್ಥ ಖರ್ಚು ಹೆಚ್ಚಾಗಲಿದೆ ಎಂದೇ ಅರ್ಥ.
ವರುಣ ದೇವನ ದೋಷವೂ ಅಂಟಿಕೊಳ್ಳುತ್ತದೆ. ಶಾಸ್ತ್ರಗಳಲ್ಲಿಯೂ ನೀರಿಗೆ ದೇವರ ಸ್ಥಾನ ನೀಡಲಾಗಿದೆ. ಇದಿಲ್ಲದೆ ಯಾವುದೇ ಪ್ರಾಣಿ ಬದುಕಲು ಸಾಧ್ಯವಿಲ್ಲ. ನೀರನ್ನು ಅವಮಾನಿಸಿದ್ರೆ ಯಾವುದೇ ದೇವರ ಅನುಗ್ರಹ ಪಡೆಯಲು ಸಾಧ್ಯವಿಲ್ಲ. ವಾಸ್ತು ಪ್ರಕಾರ, ಟ್ಯಾಪ್ ನಲ್ಲಿ ಹರಿಯುವ ವ್ಯರ್ಥ ನೀರು ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯ ಟ್ಯಾಪ್ ನಲ್ಲಿ ಯಾವ ರೀತಿ ನೀರು ಹರಿಯುತ್ತದೆಯೋ ಅದೇ ರೀತಿ ಮನೆಯಲ್ಲಿರುವ ಹಣ ಹರಿದು ಹೋಗುತ್ತದೆ. ಒಂದು ವೇಳೆ ಮನೆಯ ಟ್ಯಾಪ್ ನಲ್ಲಿ ನೀರು ತೊಟ್ಟಿಕ್ಕಲು ಶುರುವಾಗಿದ್ದರೆ ತಕ್ಷಣ ಹೊಸ ನಲ್ಲಿ ತಂದು ಜೋಡಿಸಿ.