ಬೇಕಾಗುವ ಸಾಮಾಗ್ರಿಗಳು:
ರಾಗಿ ಹಿಟ್ಟು – 1 ಕಪ್, ನೀರು – 1 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದಾಗ 1 ಕಪ್ ರಾಗಿ ಹಿಟ್ಟು ಹಾಕಿ ಕಲಸಿಕೊಳ್ಳಿ. ಬಳಿಕ ಸ್ಟೌ ಆಫ್ ಮಾಡಿ 5 ನಿಮಿಷ ಹಾಗೆಯೇ ಬಿಡಿ. ಸ್ವಲ್ಪ ತಣ್ಣಗಾದ ಕೂಡಲೇ ಇನ್ನೊಂದು ಪಾತ್ರೆಗೆ ಹಾಕಿ ಚೆನ್ನಾಗಿ ನಾದಿ. 5 ನಿಮಿಷ ಆದರೂ ನಾದಬೇಕು. ಕೈಯನ್ನು ತಣ್ಣೀರಿನಲ್ಲಿ ಅದ್ದಿಕೊಂಡು ನಾದಬೇಕು.
ಚಪಾತಿ ಮಾಡುವ ತರಹ ಉಂಡೆ ತೆಗೆದುಕೊಂಡು ಚಪಾತಿ ತರಹ ಲಟ್ಟಿಸಿಕೊಳ್ಳಿ. ಮೆದುವಾಗಿ ತೆಳ್ಳಗೆ ಲಟ್ಟಿಸಿ. ಬಳಿಕ ತವಾಗೆ ಹಾಕಿ ಎರಡೂ ಕಡೆ ಒದ್ದೆ ಬಟ್ಟೆಯಿಂದ ನೀರು ತಾಗಿಸಿ. ಬಳಿಕ ತವಾದಿಂದ ತೆಗೆದು ಒಲೆ ಮೇಲೆ ಹಾಕಿ ಕಾಯಿಸಿಕೊಳ್ಳಿ. ಚೆನ್ನಾಗಿ ಎರಡೂ ಕಡೆ ಕಾಯಿಸಿ, ರೊಟ್ಟಿ ಉಕ್ಕರಿಸಿ ಬರುತ್ತದೆ. ಇದಕ್ಕೆ ತುಪ್ಪ ಅಥವಾ ಬೆಣ್ಣೆ ಸವರಿದರೆ ಸವಿಯಲು ಬಿಸಿ ಬಿಸಿ ರಾಗಿ ರೊಟ್ಟಿ ರೆಡಿ.