ಪ್ರತಿಯೊಂದು ರಾಶಿಯವರೂ ಬೇರೆ ಬೇರೆ ಸ್ವಭಾವವನ್ನು ಹೊಂದಿರುತ್ತಾರೆ. ಗ್ರಹಗಳು ರಾಶಿ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ, ಐದು ರಾಶಿಯ ಹುಡುಗರು ಫ್ಲರ್ಟ್ ಮಾಡೋದ್ರಲ್ಲಿ ಜಾಣರಾಗಿರ್ತಾರಂತೆ.
ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಪುರುಷರು ಫ್ಲರ್ಟ್ ಮಾಡೋದ್ರಲ್ಲಿ ಮುಂದಿರುತ್ತಾರೆ. ಹುಡುಗಿಯರ ಗಮನ ಸೆಳೆಯಲು ಸದಾ ಪ್ರಯತ್ನ ನಡೆಸುತ್ತಿರುತ್ತಾರೆ. ಪ್ರೀತಿಸುವ ನಾಟಕವಾಡುವ ಸ್ವಭಾವದ ಇವರು ಯಾರನ್ನೂ ಗಂಭೀರವಾಗಿ ಪ್ರೀತಿ ಮಾಡುವುದಿಲ್ಲ.
ಮಿಥುನ ರಾಶಿಯ ಹುಡುಗರ ವ್ಯಕ್ತಿತ್ವ ವಿಚಿತ್ರವಾಗಿರುತ್ತದೆ. ಅವರು ತಮ್ಮ ಸ್ವಭಾವದಿಂದ ಹುಡುಗಿಯರನ್ನು ಆಕರ್ಷಿಸುತ್ತಾರೆ. ಈ ರಾಶಿಯ ಹುಡುಗರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
ಸಿಂಹ ರಾಶಿಯ ಹುಡುಗರು ಜನರನ್ನು ಸುಲಭವಾಗಿ ತಮ್ಮ ಮಾತಿನ ಮೂಲಕ ಆಕರ್ಷಿಸಬಲ್ಲರು. ಅವರ ಮಾತಿನ ಶೈಲಿ ಜನರಿಗೆ ಇಷ್ಟವಾಗುತ್ತದೆ. ಹುಡುಗಿಯರ ಜೊತೆ ಸ್ನೇಹ ಬೆಳೆಸಿ ಅವರನ್ನು ಸೆಳೆಯಲು ಯತ್ನಿಸುತ್ತಾರೆ. ಬಹುಬೇಗ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಹೋದ್ರೂ, ಗಂಭೀರವಾಗಿ ತೆಗೆದುಕೊಂಡ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ.
ಪ್ರೀತಿಯ ವಿಷಯದಲ್ಲಿ ಕನ್ಯಾ ರಾಶಿ ಜನರನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಇವರು ತಮ್ಮನ್ನು ಪ್ರೀತಿಸುವ ಹುಡುಗಿಯನ್ನು ಅತಿಯಾಗಿ ಪ್ರೀತಿಸುತ್ತಾರೆ.
ತುಲಾ ರಾಶಿ ಹುಡುಗರು ಬೇಗ ಹುಡುಗಿಯರನ್ನು ಆಕರ್ಷಿಸುತ್ತಾರೆ. ಯಾವುದೇ ನಾಚಿಕೆಯಿಲ್ಲದೆ ಅವರು ಮಾತನಾಡುವ ಶೈಲಿ, ಹುಡುಗಿಯರನ್ನು ಸೆಳೆಯುತ್ತದೆ.