ಈ ಮೀನು ಮನೆಯಲ್ಲಿದ್ದರೆ ದುಪ್ಪಟ್ಟಾಗುತ್ತೆ ನಿಮ್ಮ ಸಂಪತ್ತು

ಮನೆ ಅಂದ್ಮೇಲೆ ಸಾಕು ಪ್ರಾಣಿಗಳನ್ನ ಸಾಕಿದಂತೆ ಕೆಲವರಿಗೆ ಮೀನುಗಳನ್ನ ಸಾಕುವ ಹವ್ಯಾಸ ಇರುತ್ತೆ. ಮನೆಯಲ್ಲೇ ಪುಟ್ಟ ಅಕ್ವೇರಿಯಂ ನಿರ್ಮಾಣ ಮಾಡಿ ಅದರಲ್ಲಿ ಬಗೆ ಬಗೆಯ ಮೀನುಗಳನ್ನ ಸಾಕಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅರೋವಾನಾ ಮೀನುಗಳನ್ನ ಸಾಕೋದ್ರಿಂದ ಮನೆಗೆ ಶುಭ ಉಂಟಾಗುತ್ತಂತೆ.

ಅರೋವಾನಾ ಮೀನುಗಳು ಮನೆಗೆ ಉತ್ತಮ ಆರೋಗ್ಯ, ಸಂತೋಷ, ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತವಾಗಿದೆ. ಈ ಮೀನುಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನ ತೊಡೆದು ಹಾಕುತ್ತವೆಯಂತೆ. ನಿಮಗೆ ಮನೆಯಲ್ಲಿ ಮೀನುಗಳನ್ನ ಸಾಕೋದು ಕಷ್ಟ ಎಂತಾದ್ರೆ ವಾಸ್ತು ಶಾಸ್ತ್ರದಲ್ಲಿ ಇದಕ್ಕೂ ಪರಿಹಾರವಿದೆ.

ಅಕ್ವೇರಿಯಂನಲ್ಲಿ ಸಜೀವ ಮೀನನ್ನ ಸಾಕುವ ಬದಲು ಚಿನ್ನದಲ್ಲಿ ಅರೋವಾನಾ ಮೀನಿನ ಪುಟ್ಟ ಪ್ರತಿಮೆ ನಿರ್ಮಿಸಿ ಅದರ ಬಾಯಿಯಲ್ಲಿ ನಾಣ್ಯವನ್ನಿರಿಸಿ ಮನೆಯಲ್ಲಿ ಇಡಬಹುದು. ಈ ಪ್ರತಿಮೆಯನ್ನ ನೀವು ಮನೆಯ ಈಶಾನ್ಯ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಇರಿಸಬಹುದು. ಕೆಲವು ಪ್ರಾಣಿಶಾಸ್ತ್ರಜ್ಞರು ಅರೋವಾನಾ ಮೀನು ಭೂಕಂಪದ ಬಗ್ಗೆ ಪೂರ್ವ ಮಾಹಿತಿಯನ್ನೂ ನೀಡುತ್ತವೆ ಎಂದು ಹೇಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read