ಇಡೀ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಮೆದುಳು ಬಹಳ ಮುಖ್ಯ. ಹಾಗಾಗಿ ನಿಮ್ಮ ದೇಹದ ಪ್ರಮುಖ ಭಾಗವಾದ ಮೆದುಳನ್ನು ಯಾವಾಗಲೂ ಆರೋಗ್ಯದಿಂದ ಇರಿಸಿಕೊಳ್ಳಬೇಕು.
ಹಾಗಾಗಿ ಮೆದುಳಿನ ಆರೋಗ್ಯ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸಿ.
*ಮೊಟ್ಟೆ: ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಪ್ರೋಟೀನ್ ನ ಮೂಲವಾಗಿದೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಕಾರಿ.
*ಬಾದಾಮಿ : ಇದು ಮೆದುಳಿನ ಬೆಳವಣಿಗೆಗೆ, ಅದರ ಶಕ್ತಿ ಹೆಚ್ಚಿಸುವ ಒಂದು ಪ್ರಮುಖವಾದ ಆಹಾರವಾಗಿದೆ. ಹಸಿವಾದಾಗ ಒಂದು ಹಿಡಿಯಷ್ಟು ಸೇವಿಸಿದರೆ ಅಂತವರ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ.
*ಕೊಬ್ಬಿನ ಮೀನುಗಳು : ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಸ್ಮರಣಶಕ್ತಿಯನ್ನು ತೀಕ್ಷ್ಣಗೊಳಿಸುತ್ತದೆ. ಇದು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.
*ಹಸಿರು ತರಕಾರಿಗಳು : ಇದು ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಪ್ರತಿದಿನ ಸೇವಿಸಿ.
*ಗ್ರೀನ್ ಟೀ : ಇದು ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಆದ ಕಾರಣ ಇದು ನೆನೆಪಿನ ಶಕ್ತಿಯನ್ನು ಹೆಚ್ಚಿಸಿ ಮೆದುಳಿನ ಆರೋಗ್ಯ ಕಾಪಾಡುತ್ತದೆ.