ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಊಟ ಮಾಡಿದ ನಂತರ ನೀರು ಕುಡಿಯಬೇಡಿ ಎಂದು ಸಲಹೆ ನೀಡ್ತಾರೆ. ಇದು ಮೊದಲಿನಿಂದ ಬಂದ ಪರಿಪಾಠವಾದರೂ ಅದಕ್ಕೂ ವೈಜ್ಞಾನಿಕ ಕಾರಣವಿದೆ. ಯಾಕಂದ್ರೆ ಕೆಲವೊಂದು ನಿರ್ದಿಷ್ಟ ಆಹಾರಗಳ ಸೇವನೆ ನಂತರ ನೀರು ಕುಡಿಯಬಾರದು. ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಸಾಮಾನ್ಯವಾಗಿ ಜನರು ಸಿಹಿ ತಿಂಡಿಗಳನ್ನು ತಿಂದ ನಂತರ ನೀರು ಕುಡಿಯುತ್ತಾರೆ. ಆದರೆ ಹಾಗೆ ಮಾಡಬಾರದು.
ಸಿಹಿ ತಿಂದ ಬಳಿಕ ನೀರನ್ನು ಸೇವಿಸಿದರೆ ಅದು ಗಂಟಲು ನೋವು, ಕೆಮ್ಮಿಗೆ ಕಾರಣವಾಗಬಹುದು. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನೆಲ್ಲಿಕಾಯಿ ಇತ್ಯಾದಿಗಳನ್ನು ತಿಂದ ನಂತರ ನಮ್ಮ ಜೀರ್ಣಾಂಗ ವ್ಯವಸ್ಥೆಯಿಂದ ಆಮ್ಲವು ಹೊರಬರುತ್ತದೆ. ಈ ಹಣ್ಣುಗಳನ್ನು ತಿಂದ ನಂತರ ನಾವು ನೀರು ಕುಡಿದರೆ, ಪಿಹೆಚ್ ಸಮತೋಲನವು ತೊಂದರೆಗೊಳಗಾಗುತ್ತದೆ.
ಅದಕ್ಕಾಗಿಯೇ ನಾವು ಹುಳಿ ಹಣ್ಣುಗಳನ್ನು ತಿಂದ ನಂತರ ನೀರನ್ನು ಕುಡಿಯಬಾರದು. ಹಾಲು ಕುಡಿದ ನಂತರ ಕೂಡ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ಹಾಲಿನಲ್ಲಿರುವ ಪ್ರೋಟೀನ್‌ನ ಚಯಾಪಚಯವು ನಿಧಾನವಾಗುತ್ತದೆ. ಇದರಿಂದ ಅಸಿಡಿಟಿ, ಅಜೀರ್ಣವೂ ಬರಬಹುದು. ಹಾಗಾಗಿಯೇ ಹಾಲು ಕುಡಿದ ನಂತರ ನೀರು ಕುಡಿಯಬಾರದು. ಕಲ್ಲಂಗಡಿ ಸುಮಾರು 90 ಪ್ರತಿಶತದಷ್ಟು ನೀರನ್ನು ಹೊಂದಿರುತ್ತದೆ.
ಕಲ್ಲಂಗಡಿ ಹಣ್ಣು ಅಥವಾ ಜ್ಯೂಸ್ ಸೇವಿಸಿದ ನಂತರ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ಹೊಟ್ಟೆಯು ಉಬ್ಬರಿಸುತ್ತದೆ. ಹೊಟ್ಟೆ ನೋವು ಅಥವಾ ಅಜೀರ್ಣದ ಸಮಸ್ಯೆ ಬರಬಹುದು. ಹಣ್ಣುಗಳನ್ನು ಸೇವಿಸಿದ ನಂತರ ನೀರನ್ನು ಕುಡಿಯಬಾರದು. ಏಕೆಂದರೆ ಅದು ದೇಹದ ಸಮತೋಲನವನ್ನು ಹಾಳು ಮಾಡುತ್ತದೆ. ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ, ಅರ್ಧ ಗಂಟೆಯ ಬಳಿಕ ನೀರನ್ನು ಕುಡಿಯಬಹುದು.