ಬದನೆಕಾಯಿ – 1/4 ಕೆಜಿ
ಬ್ರೆಡ್ ಸ್ಲೈಸ್ – 4
ಈರುಳ್ಳಿ – 2
ಹಸಿ ಮೆಣಸಿನಕಾಯಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಟೊಮೆಟೊ ಸಾಸ್ – 2 ಚಮಚ
ಮೈದಾ ಹಿಟ್ಟು – 2 ಚಮಚ
ಸಾಸಿವೆ – 1 ಚಮಚ
ಖಾರ ಪುಡಿ – 1 ಚಮಚ
ಹಸಿ ಕೊತ್ತಂಬರಿ ತುರಿ ಸ್ವಲ್ಪ
ದನಿಯ ಪುಡಿ – 1 ಚಮಚ
ಜೀರಿಗೆ – 1 ಚಮಚ
ಅರಿಶಿಣ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವು – 2 ಕಡ್ಡಿ
ಕೊತ್ತಂಬರಿ ಸೊಪ್ಪು ಸ್ವಲ್ಪ
ಎಣ್ಣೆ ಬೇಕಾಗುವಷ್ಟು
ಮಾಡುವ ವಿಧಾನ
ಬ್ರೆಡ್ ಸ್ಲೈಸ್ ಗಳನ್ನು ಪುಡಿ ಮಾಡಿಕೊಳ್ಳಬೇಕು. ಬದನೆಕಾಯಿಯನ್ನು ಬೇಯಿಸಿ ನುಣ್ಣಗೆ ಮಾಡಿಕೊಳ್ಳಬೇಕು. ಇದಕ್ಕೆ ಉಪ್ಪು, ಖಾರ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಮೈದಾ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ ಬ್ರೆಡ್ ಪುಡಿಯಲ್ಲಿ ಹೊರಳಿಸಿ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಫ್ರೈ ಮಾಡಿ ತೆಗೆದಿಟ್ಟುಕೊಳ್ಳಬೇಕು.
ಸ್ಟವ್ ಮೇಲೆ ಬೇರೊಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ನಂತರ ಜೀರಿಗೆ, ಸಾಸಿವೆ ಹಾಕಿ. ಎಣ್ಣೆಯಲ್ಲಿ ಬೆಂದ ನಂತರ ಈರುಳ್ಳಿ ಚೂರುಗಳನ್ನು ಹಾಕಬೇಕು. ಅದು ಮೆತ್ತಗಾದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊಬ್ಬರಿತುರಿ, ದನಿಯಾ ಪುಡಿ ಹಾಕಿ ಸ್ವಲ್ಪ ಕಾಲ ಮುಚ್ಚಿಡಬೇಕು.
ಬಳಿಕ ಈಗಾಗಲೇ ಕರೆದಿರುವ ಬದನೆಕಾಯಿ ಬಾಲ್ಸ್, ಟೊಮ್ಯಾಟೋ ಸಾಸ್, ಕೊತ್ತಂಬರಿ ಸೊಪ್ಪು ಹಾಕಬೇಕು. ಸಣ್ಣ ಉರಿಯಲ್ಲಿ ಐದು ನಿಮಿಷಗಳ ಕಾಲ ಬಿಸಿ ಮಾಡಿ ಕೆಳಗಿಳಿಸಬೇಕು. ನಂತರ ಗೋಡಂಬಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬದನೆಕಾಯಿ ಮಂಚೂರಿ ರೆಡಿ ಟು ಈಟ್.