ಇನ್ನೋವಾ ಕಾರನ್ನೂ ಮೀರಿಸುವಂತಿದೆ ಕಿಯಾ ಮೋಟಾರ್ಸ್‌ನ ಈ ಸೆವೆನ್‌ ಸೀಟರ್‌…!

ಆಟೋ ಎಕ್ಸ್‌ಪೋ 2023 ರಲ್ಲಿ ಕಿಯಾ ಮೋಟಾರ್ಸ್‌ ತನ್ನ EV9 ಎಲೆಕ್ಟ್ರಿಕ್ SUV ಮತ್ತು KA4 ಕಾರನ್ನು ಪರಿಚಯಿಸಿದೆ.  Kia EV9 ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರ್ ಅನ್ನೋದು ವಿಶೇಷ.  KA4 ಭಾರತದಲ್ಲಿ ಕಿಯಾ ಕಾರ್ನಿವಲ್‌ನ ಹೊಸ ತಲೆಮಾರಿನ ಮಾಡೆಲ್‌ ಎಂದೇ ಬಣ್ಣಿಸಲಾಗುತ್ತಿದೆ.

ಇವುಗಳ ಹೊರತಾಗಿ ಕಂಪನಿ ತನ್ನ ಕಿಯಾ ಕೇರೆನ್ಸ್‌ MPVಯ ಎರಡು ಪರ್ಪಸ್ ಬಿಲ್ಟ್ ವೆಹಿಕಲ್ (PBV) ಆವೃತ್ತಿಗಳನ್ನು ಸಹ ಲಾಂಚ್‌ ಮಾಡಿದೆ. ಕಿಯಾ ಕೇರೆನ್ಸ್‌ನ ಪೋಲೀಸ್ ಕಾರು ಮತ್ತು ಆಂಬ್ಯುಲೆನ್ಸ್ ಆವೃತ್ತಿಯನ್ನು ಕೂಡ ರಿವೀಲ್‌ ಮಾಡಲಾಗಿದೆ.

ಇನ್ನೋವಾ ಕಾರನ್ನೂ ಮೀರಿಸುವಂತಿದೆ ಅದರ ಫೀಚರ್‌ಗಳು. ಕಿಯಾ ಕೇರೆನ್ಸ್‌ ಪೊಲೀಸ್ ಆವೃತ್ತಿಯ ಕಾರು ಸುತ್ತಲೂ ಕೆಂಪು ಮತ್ತು ನೀಲಿ ಬಣ್ಣದ ಡೆಕಾಲ್‌ಗಳೊಂದಿಗೆ ಬಿಳಿ ಥೀಮ್ ಅನ್ನು ಹೊಂದಿದೆ. ಗ್ರಾಫಿಕ್ಸ್ ಮೂಲಕ ಪೊಲೀಸ್ ಎಂದು ಬರೆಯಲಾಗಿದೆ. ವಿಶೇಷವೆಂದರೆ ಪೊಲೀಸರನ್ನು ಗಮನದಲ್ಲಿಟ್ಟುಕೊಂಡು ಹಲವು ಪ್ರಮುಖ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ.

ಮೇಲೆ ಪೊಲೀಸ್ ಲೈಟ್ ಇರುವುದರಿಂದ ಒಳಗೆ ಸೈರನ್ ನೀಡಲಾಗಿದೆ. ಪ್ರಮುಖ ಘಟನೆಗಳನ್ನು ದಾಖಲಿಸುವ ಡ್ಯಾಶ್ ಕ್ಯಾಮ್ ಇದರಲ್ಲಿ ಲಭ್ಯವಿದೆ. ವಾಹನದಲ್ಲಿ ಅಗ್ನಿ ಶಾಮಕವನ್ನು ಇರಿಸಲಾಗಿದೆ. ಇದು ಟೈರ್ ಪ್ರೆಶರ್ ಮಾನಿಟರ್ ಸಿಸ್ಟಮ್ ಮತ್ತು ರಿಕ್ಲೈನಿಂಗ್ ಸೀಟ್‌ಗಳನ್ನು ಪಡೆದಿದೆ.

ಕಿಯಾ ಕೇರೆನ್ಸ್ ಆಂಬ್ಯುಲೆನ್ಸ್ ಆವೃತ್ತಿಪೊಲೀಸ್ ಕಾರಿನಂತೆ ಇದರಲ್ಲೂ ಬಿಳಿ ಬಣ್ಣಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸುತ್ತಲೂ ಹಳದಿ ಮತ್ತು ಕೆಂಪು ಡೆಕಲ್‌ಗಳಿವೆ. ಇದಕ್ಕೆ ಸ್ಟ್ರೆಚರ್ ಬೆಡ್, ಆಮ್ಲಜನಕ ಸಿಲಿಂಡರ್ ಮತ್ತು ಹೆಲ್ತ್‌ ಮಾನಿಟರ್ ಒದಗಿಸಲಾಗಿದೆ. ಕಿಯಾ ಮೋಟಾರ್ಸ್‌ನ ಆಂಬ್ಯುಲೆನ್ಸ್ ಮತ್ತು ಪೊಲೀಸ್ ಕಾರ್ ಆವೃತ್ತಿಗಳು ಅತ್ಯಂತ ವಿಶಿಷ್ಟ ಫೀಚರ್‌ಗಳನ್ನು ಹೊಂದಿವೆ. ಇವುಗಳಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು, ಪ್ಲಾಸ್ಟಿಕ್ ಕ್ಯಾಪ್‌ಗಳನ್ನು ಹೊಂದಿರುವ ಸ್ಟೀಲ್ ಚಕ್ರಗಳು ಮತ್ತು ಹೆಡ್‌ಲ್ಯಾಂಪ್‌ಗಳ ಸುತ್ತಲೂ ಸ್ಯಾಟಿನ್ ಸಿಲ್ವರ್ ಅಲಂಕಾರವಿದೆ. ಮುಂಭಾಗದ ಬಂಪರ್‌ನಲ್ಲಿ ಏರ್ ಡ್ಯಾಮ್ ಸೇರಿದೆ. ತಿರುವು ಸೂಚಕಗಳನ್ನು ಮುಂಭಾಗದ ಫೆಂಡರ್‌ಗಳಲ್ಲಿ ಅಳವಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read