ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಈ ದಾಖಲೆಗೆ ಪಾತ್ರರಾಗಲಿದ್ದಾರೆ ಕೆ.ಎಲ್. ರಾಹುಲ್

ಭಾರತ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಕೆ ಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಒಂದದು ದಾಖಲೆ ಬರೆಯಲಿದ್ದಾರೆ.

ಕೆ ಎಲ್ ರಾಹುಲ್ ಇಂದು ತಮ್ಮ 50ನೇ ಏಕದಿನ ಪಂದ್ಯವಾಡಲು ಸಜ್ಜಾಗಿದ್ದಾರೆ. ಭಾರತ ತಂಡದಲ್ಲಿ ಇತ್ತೀಚಿಗೆ ಯುವ ಬ್ಯಾಟ್ಸ್‌ಮನ್‌ ಗಳು ಮಿಂಚುತ್ತಿದ್ದು ಕೆ.ಎಲ್ ರಾಹುಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾಗಿದೆ.

2016ರಲ್ಲಿ ನಡೆದ ಭಾರತ ಹಾಗೂ ಜಿಂಬಾಬ್ವೆ ನಡುವಣ ಏಕದಿನ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ ಇದುವರೆಗೆ 49 ಏಕದಿನ ಪಂದ್ಯಗಳ ನಾಡಿದ್ದು, 1799 ರನ್ ಬಾರಿಸಿದ್ದಾರೆ.

ಇದರಲ್ಲಿ 11 ಅರ್ಧಶತಕ ಹಾಗೂ 5 ಶತಕಗಳಿವೆ. ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುತ್ತಿದ್ದ ಕೆ ಎಲ್ ರಾಹುಲ್ ಇದೀಗ 5 ನೇ ಬ್ಯಾಟ್ಸ್‌ಮನ್‌ ಆಗಿ ಆಗಮಿಸುತ್ತಿದ್ದು ಕೆ ಎಲ್ ರಾಹುಲ್ ಅವರಿಗೆ ಇದೊಂದು ಹೊಸ ಜವಾಬ್ದಾರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read