ಇಂಥಾ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿ ದುರಂತ ಸ್ಥಿತಿ ತಂದುಕೊಂಡ ಮಹಿಳೆ….!

ಟ್ಯಾಟೂಗಳ ಟ್ರೆಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅನೇಕರು ಉತ್ಸಾಹದಲ್ಲಿ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು ಬಿಡ್ತಾರೆ. ಇನ್ನು ಕೆಲವರು ಬೇಡವಾದ ಜಾಗದಲ್ಲಿ ಹಚ್ಚೆ ಹಾಕಿಸಿಕೊಂಡು ಅಂಗಾಂಗ ವೈಫಲ್ಯವನ್ನೂ ಅನುಭವಿಸ್ತಾರೆ. ಅದೇ ರೀತಿ ಪೋಲೆಂಡ್‌ನಲ್ಲಿ ಟ್ಯಾಟೂ ಹಾಕಿಸಿಕೊಂಡ ಮಹಿಳೆ ದೃಷ್ಟಿಯನ್ನೇ ಕಳೆದುಕೊಂಡಿದ್ದಾಳೆ. ಆಕೆಗೀಗ ಕಣ್ಣು ಕಾಣಿಸುತ್ತಿಲ್ಲ.

ಜೀವನದುದ್ದಕ್ಕೂ ವಿಷಾದಿಸುವಂತಹ ಸ್ಥಳದಲ್ಲಿ ಹಚ್ಚೆ ಹಾಕಿಸಿಕೊಂಡು ಮಹಿಳೆ ಈ ಯಡವಟ್ಟು ಮಾಡಿಕೊಂಡಿದ್ದಾಳೆ. ಈಕೆಯ ಹೆಸರು ಅಲೆಕ್ಸಾಂಡ್ರಾ ಸಡೋವ್ಸ್ಕಾ. ಆಕೆಗೆ ಮೊದಲಿನಿಂದ್ಲೂ ಟ್ಯಾಟೂ ಹುಚ್ಚು. ಕಣ್ಣಿಗೆ ಹಚ್ಚೆ ಹಾಕಿಸಿಕೊಳ್ಳಬೇಕೆಂಬ ಯೋಚನೆ ಅವಳಿಗೆ ಬಂದಿತ್ತು. ಟ್ಯಾಟೂ ತಜ್ಞರ ಬಳಿ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ಅಲೆಕ್ಸಾಂಡ್ರಾ ಈ ಹಿಂದೆಯೇ ದೇಹದ ಕೆಲವು ಭಾಗಗಳಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಳು.

ಈ ಬಾರಿ ಕಣ್ಣಿನ ರೆಪ್ಪೆಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳಲು ಮುಂದಾಗಿದ್ದಾಳೆ. ಆಕೆ ಹೇಳಿದಂತೆಯೇ ಆತ ಟ್ಯಾಟೂ ಹಾಕಿದ್ದಾನೆ. ಆ ಸಮಯದಲ್ಲಿ ಅಲೆಕ್ಸಾಂಡ್ರಾಗೆ ಸ್ವಲ್ಪ ನೋವು ಕಾಣಿಸಿಕೊಂಡಿತ್ತು, ಬಳಿಕ ಅದು ಕಡಿಮೆಯೂ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ನಿಧಾನವಾಗಿ ಕಣ್ಣುಗಳಲ್ಲಿ ನೋವು ಶುರುವಾಯಿತು. ಆಕೆಯ ದೃಷ್ಟಿ ಶಕ್ತಿಯೂ ಕಡಿಮೆಯಾಗತೊಡಗಿತು. ಆಕೆ ವೈದ್ಯರ ಬಳಿ ಹೋಗುವಷ್ಟರಲ್ಲಿ ತಡವಾಗಿತ್ತು.

ಟ್ಯಾಟೂ ಹಾಕಿಸಿಕೊಳ್ಳುವಾಗ ಕಣ್ಣಿನೊಳಗೆ ಸೂಜಿ ಹೋಗಿದೆ ಎಂದು ವೈದ್ಯರು ತಿಳಿಸಿದ್ರು. ಅವಳ ಎರಡೂ ಕಣ್ಣುಗಳಿಗೆ ಸಾಕಷ್ಟು ಹಾನಿಯಾಗಿದೆ. ಕಣ್ಣಿನ ಪೊರೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಆಕೆ ತುತ್ತಾಗಿದ್ದಳು. ಹಲವಾರು ಬಾರಿ ಕಣ್ಣಿನ ಆಪರೇಷನ್ ಮಾಡಿದರೂ ಪ್ರಯೋಜನವಾಗಿಲ್ಲ. ಅಲೆಗ್ಸಾಂಡ್ರಾಗೆ ಒಂದು ಕಣ್ಣು ಸಂಪೂರ್ಣವಾಗಿ ಕಾಣಿಸುತ್ತಿಲ್ಲ. ಇನ್ನೊಂದು ಕಣ್ಣಿನಲ್ಲೂ ದೃಷ್ಟಿ ಕಡಿಮೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read