
ಆಚಾರ್ಯ ಚಾಣಕ್ಯನ ನೀತಿಗಳು ನೂರಾರು ವರ್ಷಗಳ ಹಿಂದಿನಿಂದಲೂ ಪ್ರಸಿದ್ಧಿ ಪಡೆದಿವೆ. ಚಾಣಕ್ಯನ ನೀತಿಗಳು ಜೀವನ ನಡೆಸಲು ಸರಿಯಾದ ಮಾರ್ಗವನ್ನು ಕಲಿಸುತ್ತವೆ. ಆಚಾರ್ಯ ಚಾಣಕ್ಯ, ಕೆಲ ವ್ಯಕ್ತಿಗಳಿಗೆ ಎಂದೂ ಲಕ್ಷ್ಮಿ ಒಲಿಯಲು ಸಾಧ್ಯವಿಲ್ಲ ಎಂದಿದ್ದಾರೆ.
ತಡವಾಗಿ ಮಲಗುವವರು ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸುತ್ತಾರಂತೆ. ಸೂರ್ಯ ನೆತ್ತಿ ಮೇಲೆ ಬರುವವರೆಗೂ ಮಲಗುವವರ ಮನೆಯಲ್ಲಿ ಲಕ್ಷ್ಮಿ ಬಹಳ ಹೊತ್ತು ಇರುವುದಿಲ್ಲವಂತೆ. ಲಕ್ಷ್ಮಿ ಆಶೀರ್ವಾದ ಇರುವುದಿಲ್ಲ.
ಅಸಭ್ಯವಾಗಿ ವರ್ತಿಸುವ, ಕೋಪದಿಂದ ಮಾತನಾಡುವ ಜನರನ್ನು ಯಾರೂ ಇಷ್ಟಪಡುವುದಿಲ್ಲ. ತಾಯಿ ಲಕ್ಷ್ಮಿ ಕೂಡ ಅಂಥವರನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅಂಥವರ ಮನೆಯಲ್ಲಿ ತಾಯಿ ನೆಲೆಸುವುದಿಲ್ಲ.
ಪ್ರತಿನಿತ್ಯ ಸ್ನಾನ ಮಾಡುವುದು, ಹಲ್ಲುಗಳನ್ನು ಸ್ವಚ್ಛಗೊಳಿಸುವುದು, ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದು ಬಹಳ ಮುಖ್ಯ. ಕೊಳಕಿನ ಜೀವನ ನಡೆಸುವವರ ಮನೆಯಲ್ಲಿ ಎಂದೂ ಲಕ್ಷ್ಮಿ ಇರುವುದಿಲ್ಲ. ಸ್ವಚ್ಛತೆ ಇಲ್ಲದವರ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.
ವಂಚನೆ ಮತ್ತು ಅಪ್ರಾಮಾಣಿಕತೆಯಿಂದ ತುಂಬಾ ದಿನ ಪ್ರಯೋಜನಕ್ಕೆ ಬರುವುದಿಲ್ಲ. ಸತ್ಯ ಗೊತ್ತಾದಾಗ ಜನರು ಅವರಿಂದ ದೂರ ಹೋಗ್ತಾರೆ. ಲಕ್ಷ್ಮಿ ಕೂಡ ಅಂತಹ ಜನರ ಪರ ನಿಲ್ಲುವುದಿಲ್ಲ.
ಆಚಾರ್ಯ ಚಾಣಕ್ಯ ಹೇಳುವಂತೆ, ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ದೇಹಕ್ಕೆ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ಸೇವಿಸಬೇಕು. ಅತಿಯಾದ ಆಹಾರವನ್ನು ಸೇವಿಸುವುದರಿಂದ ಅನೇಕ ರೋಗಗಳು ಉಂಟಾಗುತ್ತವೆ. ಕೈನಲ್ಲಿದ್ದ ಹಣ ಖಾಲಿಯಾಗುತ್ತದೆ.