ವಿಧಾನಸಭಾ ಚುನಾವಣಾ ಕಾವು ದಿನೇ ದಿನೇ ಏರಿಕೆಯಾಗುತ್ತಿದ್ದು, ಪಕ್ಷಗಳ ನಾಯಕರ ಆರೋಪ ಪ್ರತ್ಯಾರೋಪವೂ ಹೆಚ್ಚಾಗಿದೆ. ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದೂ ಕಂಡುಬರುತ್ತಿದೆ.
ಗುರುವಾರವಷ್ಟೇ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದು ಟೀಕಿಸಿದ್ದು, ಇದಕ್ಕೆ ಬಿಜೆಪಿ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಳಿಕ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೋರಿದ್ದರು.
ಇದೀಗ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಹುಚ್ಚ ಎಂದು ಹೇಳುವ ಮೂಲಕ ಕಾಂಗ್ರೆಸ್ ನವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೊಪ್ಪಳದಲ್ಲಿ ಮಾತನಾಡುವ ವೇಳೆ ಬಸವರಾಜ ರಾಯರೆಡ್ಡಿ ಅವರನ್ನು ಟೀಕಿಸಿದ ಅವರು, ಅಲ್ಲಿ ರಾಹುಲ್ ಹುಚ್ಚ, ಇಲ್ಲಿ ಟಿಕ್ಕ ರಾಯರೆಡ್ಡಿ ಎಂದು ಹೇಳಿದ್ದು ಮೋದಿ ವಿಷ ಸರ್ಪವಾದರೆ ಸೋನಿಯಾ ಗಾಂಧಿ ಏನು ವಿಷಕನ್ಯೆನಾ ಎಂದು ಪ್ರಶ್ನಿಸಿದ್ದಾರೆ.