ಸಂಬಂಧಗಳನ್ನು ನಿಭಾಯಿಸುವುದು ಸವಾಲಿನ ಕೆಲಸ. ಅದರಲ್ಲೂ ಪತಿ-ಪತ್ನಿಯ ಸಂಬಂಧ ಅತ್ಯಂತ ನಾಜೂಕಾಗಿರುತ್ತದೆ. ಸಣ್ಣ-ಪುಟ್ಟ ತಪ್ಪುಗಳಿಂದಲೂ ಒಮ್ಮೊಮ್ಮೆ ಸಂಬಂಧಗಳೇ ಮುರಿದುಹೋಗುತ್ತವೆ. ಸಂಬಂಧವನ್ನು ದೀರ್ಘಾವಧಿಯವರೆಗೆ ಕಾಪಾಡಿಕೊಳ್ಳಲು ಬಯಸಿದರೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಂಬಂಧವನ್ನು ಮುರಿಯಬಲ್ಲ ವಿಷಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳಬೇಕು.
ಮರೆತಿರುವ ಹಳೆಯ ಕಹಿ ವಿಚಾರಗಳನ್ನು ಕೆದಕುವುದು – ಯಾವುದಾದರೂ ವಿಷಯದ ಬಗ್ಗೆ ಕೋಪಗೊಂಡರೆ ತಕ್ಷಣ ಅದನ್ನು ವ್ಯಕ್ತಪಡಿಸಿ. ಕೋಪವನ್ನು ನಿಗ್ರಹಿಸಿದರೆ ಅದು ಮುಂದೆ ಒಂದಲ್ಲ ಒಂದು ದಿನ ಹೊರಬರುತ್ತದೆ. ಇದರಿಂದಾಗಿ ಸಂಬಂಧವು ಮುರಿಯಬಹುದು. ಆದ್ದರಿಂದ. ಹಾಗಾಗಿ ತಕ್ಷಣ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು.
ಸರ್ಪ್ರೈಸ್ ಇಲ್ಲದ ನೀರಸ ಬದುಕು – ಸರ್ಪ್ರೈಸ್ ಇಲ್ಲದಿದ್ದರೆ ಬದುಕು ನೀರಸವಾಗಿರುತ್ತದೆ. ಹಾಗಾಗಿ ಸಂಬಂಧಗಳಲ್ಲಿ ಸರ್ಪ್ರೈಸ್ ಕೊಡುವುದು ಬಹಳ ಮುಖ್ಯ. ಆರಂಭದಲ್ಲಿ ಒಬ್ಬರಿಗೊಬ್ಬರು ಸರ್ಪ್ರೈಸ್ ಕೊಡ್ತಾರೆ, ಆದರೆ ಕಾಲಾನಂತರ ಅದೆಲ್ಲವೂ ಮರೆಯಾಗಿಬಿಡುತ್ತದೆ. ಇದರಿಂದ ಸಂಬಂಧ ಬೋರ್ ಎನಿಸಬಹುದು. ಸರ್ಪ್ರೈಸ್ ನೀಡುವುದರಿಂದ ಪ್ರೀತಿ ಮತ್ತು ಹೊಸತನವಿರುತ್ತದೆ.
ಸಂಗಾತಿ ಅಥವಾ ಸಂಬಂಧವನ್ನು ಲಘುವಾಗಿ ಪರಿಗಣಿಸುವುದು– ಅನೇಕರು ತಮ್ಮ ಸಂಗಾತಿ ಅಥವಾ ಅವರ ಸಂಬಂಧವನ್ನು ಲಘುವಾಗಿ ಪರಿಗಣಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೀಗೆ ಮಾಡುವುದರಿಂದ ಅವರ ನಡುವೆ ಅಂತರ ಬರಲು ಪ್ರಾರಂಭಿಸುತ್ತದೆ. ಆದ್ದರಿಂದ. ಸಂಗಾತಿ ಅಥವಾ ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಏಕೆಂದರೆ ಅದು ಸಂಬಂಧವನ್ನು ಹಾಳುಮಾಡುತ್ತದೆ