ಅಪಘಾತದ ಸಂದರ್ಭದಲ್ಲಿ ಜತನದಿಂದ ನೋಡಿಕೊಂಡ ಭಾವಿ ವರ; ಭಾವುಕ ಪೋಸ್ಟ್‌ ಹಂಚಿಕೊಂಡ ವಧು

ಮದುವೆಗೂ ಮುಂಚೆ ವಧು ಅಪಘಾತಕ್ಕೀಡಾಗಿದ್ದು, ಆಕೆಯ ಸಂಗಾತಿ ವಧುವನ್ನು ಮದುವೆಯಾಗುವ ಕ್ಷಣದವರೆಗೂ ನೋಡಿಕೊಂಡ ರೀತಿ ನೆಟ್ಟಿಗರ ಹೃದಯ ಗೆದ್ದಿದೆ.

ಪ್ರಸೂತಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುವ ಶತಾಕ್ಷಿ ಅವರು ತಮ್ಮ ಜೀವನದಲ್ಲಾದ ಈ ಅನುಭವವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಸಂಗಾತಿ ಪ್ರತೀಕ್ ನಿರಂತರ ಬೆಂಬಲ ನೀಡುವ ಮೂಲಕ ಆಕೆಯ ಚೇತರಿಕೆಗೆ ಸಹಕರಿಸಿದ ಪ್ರಯಾಣ ವಿಡಿಯೋದಲ್ಲಿದೆ.

ಗರ್ಭಧಾರಣೆ ಮತ್ತು ಪ್ರಸವಾನಂತರದ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳುವ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶತಾಕ್ಷಿ ತಮ್ಮ ಚೇತರಿಕೆಯ ಪ್ರಯಾಣ ಮತ್ತು ಮದುವೆಯ ಬಗ್ಗೆ ಹಂಚಿಕೊಂಡಿದ್ದಾರೆ.

ತನ್ನ ಅಪಘಾತದ ನಂತರ, ತನ್ನ ಸಂಗಾತಿಯು ತನ್ನೊಂದಿಗೆ ಐಸಿಯುನಲ್ಲಿಯೇ ಇದ್ದರು. ತನ್ನ ಚಿಕಿತ್ಸೆಗಾಗಿ ರಕ್ತದಾನ ಮಾಡಿದರು ಎಂದು ಶತಾಕ್ಷಿ ಹಂಚಿಕೊಂಡಿದ್ದಾರೆ.

ಪ್ರತಿದಿನವೂ ಆಕೆಯನ್ನು ಆಸ್ಪತ್ರೆಗೆ ಬಂದು ನೋಡುತ್ತಿದ್ದ ಅವರು ಅಪಘಾತದ ಎರಡು ತಿಂಗಳ ನಂತರ ಶತಾಕ್ಷಿಯನ್ನು ಮದುವೆಯಾಗಿದ್ದಾರೆ. ಆಕೆ ಚೇತರಿಸಿಕೊಂಡ ನಂತರ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಮದುವೆ ದಿನ ಆಕೆಯನ್ನ ಎತ್ತಿಕೊಂಡು ಮದುವೆ ಶಾಸ್ತ್ರಗಳನ್ನು ಪೂರೈಸಿದ್ದಾರೆ. ವಿಡಿಯೋ ಮೆಚ್ಚಿಕೊಂಡ ಹಲವರು ಈ ಜೋಡಿಯನ್ನ ಹರಸಿದ್ದಾರೆ.

https://youtu.be/9c8e1s63pq0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read