ನವದೆಹಲಿ: ಅದಾನಿ ಸಮೂಹದ ಸಂಸ್ಥೆಗಳ ಬಗ್ಗೆ ಹಿಂಡನ್ಬರ್ಗ್ ನೀಡಿದ್ದ ಸಂಶೋಧನಾ ವರದಿ ದೊಡ್ಡ ಮಟ್ಟದಲ್ಲಿ ಅದಾನಿ ಕುಸಿತಕ್ಕೆ ಕಾರಣವಾಗಿತ್ತು. ಒಂದು ವಾರಕ್ಕೆ ಅದಾನಿ ಶ್ರೀಮಂತರ ಪಟ್ಟಿಯಲ್ಲಿ ಕೆಳಗಿನ ಸ್ಥಾನಕ್ಕೆ ಕುಸಿದಿದ್ದರು. ಕೋರ್ಟ್ ನಲ್ಲಿ ಈ ಅಕ್ರಮ ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹೌದು, ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಾಳೆ ಕೈಗೆತ್ತಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಅಡ್ವೊಕೇಟ್ ವಿಶಾಲ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ನ್ಯಾ. ಪಿಎಸ್ ನರಸಿಂಹ ಹಾಗೂ ಜೆ ಪಿ ಪರ್ದಿವಾಲ ಅವರಿದ್ದ ಪೀಠಕ್ಕೆ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಇದೇ ಅರ್ಜಿ ವಿಚಾರಣೆ ಶುಕ್ರವಾರದಂದು ವಿಚಾರಣೆ ತೆಗೆದುಕೊಳ್ಳಲು ಹೇಳಿದೆ.
ಈ ವರದಿಯನ್ನು ಅದಾನಿ ಸಂಸ್ಥೆ ತೀವ್ರವಾಗಿ ಖಂಡಿಸಿದೆ. ತಪ್ಪು ಮಾಹಿತಿ, ಆಧಾರವಿಲ್ಲದ ಹಾಗೂ ವಿಶ್ವಾಸಾರ್ಹವಲ್ಲದ ಮಾಹಿತಿಯನ್ನು ಕೆಟ್ಟ ಉದ್ದೇಶದಿಂದ ವರದಿ ನೀಡಲಾಗಿದೆ ಎಂದು ಹೇಳಿದೆ. ಈ ವರದಿ ನಂತರ ಇಡೀ ದೇಶದಲ್ಲಿ ಆರ್ಥಿಕತೆ ವಿಚಾರದಲ್ಲಿ ಅನೇಕ ಬದಲಾವಣೆ ಆಗಿದ್ದಂತು ನಿಜ. ಇದೀಗ ಈ ವಿಚಾರ ಕೋರ್ಟ್ ವರೆಗೂ ಬಂದಿದೆ.