alex Certify ಅತಿಯಾಗಿ ಮೊಬೈಲ್ ನೋಡಿದಾಗ ಕಣ್ಣಿನಲ್ಲಿ ನೀರು ಬರುವುದೇಕೆ….? ಇಲ್ಲಿದೆ ಶಾಕಿಂಗ್‌ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾಗಿ ಮೊಬೈಲ್ ನೋಡಿದಾಗ ಕಣ್ಣಿನಲ್ಲಿ ನೀರು ಬರುವುದೇಕೆ….? ಇಲ್ಲಿದೆ ಶಾಕಿಂಗ್‌ ಕಾರಣ…!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ಜನರ ಅಗತ್ಯದ ಜೊತೆಗೆ ಚಟವೂ ಆಗಿಬಿಟ್ಟಿದೆ. ಮೊಬೈಲ್‌ ಇಲ್ಲದೆ ಬದುಕುವುದೇ ಕಷ್ಟವಾಗುತ್ತಿದೆ. ಎಷ್ಟೋ ಜನರು ತಡರಾತ್ರಿವರೆಗೂ ಮೊಬೈಲ್‌ ನೋಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬೆಳಗ್ಗೆ ಎದ್ದತಕ್ಷಣ ನಾವು ಮೊದಲು ನೋಡುವುದೇ ಮೊಬೈಲ್.‌ ಈ ರೀತಿ ಅತಿಯಾಗಿ ಮೊಬೈಲ್‌ ವೀಕ್ಷಿಸುವುದರಿಂದ ಕಣ್ಣಿನಲ್ಲಿ ನೀರು ಸುರಿಯುತ್ತದೆ. ವಾಸ್ತವವಾಗಿ ಸೆಲ್‌ಫೋನ್‌ನಿಂದ ಹೊರಬರುವ ನೀಲಿ ದೀಪವು ಕಣ್ಣಿನಲ್ಲಿ ನೀರು ತರುತ್ತದೆ. ಸ್ವಲ್ಪ ಸಮಯ ಫೋನ್ ನೋಡಿದರೂ ಕಣ್ಣುಗಳಲ್ಲಿ ನೀರು ಬರಲು ಪ್ರಾರಂಭಿಸಿದರೆ ಅಥವಾ ಅವು ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಕಣ್ಣಿನ ಸಮಸ್ಯೆ ಇದೆ ಎಂದು ಅರ್ಥಮಾಡಿಕೊಳ್ಳಿ.

ಕಣ್ಣುಗಳಲ್ಲಿ ನೀರು ಬರಲು ಕಾರಣ 

ಕಣ್ಣುಗಳಲ್ಲಿ ಶುಷ್ಕತೆ

ಕಣ್ಣಿನ ಸ್ನಾಯುಗಳು ನಮ್ಮ ದೇಹದ ಅತ್ಯಂತ ಸಕ್ರಿಯ ಸ್ನಾಯುಗಳಾಗಿವೆ. ಕಣ್ಣುಗಳು ಒಣಗದಂತೆ ತಡೆಯುವುದು ಇದರ ಕೆಲಸ. ಹಲವಾರು ಸೆಕೆಂಡುಗಳ ಕಾಲ ನಿರಂತರವಾಗಿ ಕಣ್ಣುಗಳನ್ನು ತೆರೆದುಕೊಂಡೇ ಇದ್ದಾಗ ಅದರಲ್ಲಿ ನೀರು ಬರಲು ಪ್ರಾರಂಭಿಸುತ್ತದೆ ಎಂಬುದು ನಮ್ಮ ಭಾವನೆ. ಆದರೆ ದೇಹದಲ್ಲಿ ನೀರು, ಎಣ್ಣೆ ಮತ್ತು ಲೋಳೆಯ ಸಮತೋಲನವು ಸರಿಯಾದ ರೀತಿಯಲ್ಲಿ ಇಲ್ಲದಿದ್ದಾಗ, ಕಣ್ಣುಗಳು ಒಣಗಲು ಪ್ರಾರಂಭಿಸುತ್ತವೆ, ಆದ್ದರಿಂದ ಅವುಗಳಲ್ಲಿ ನೀರು ಬರುತ್ತದೆ.

ಅಲರ್ಜಿ

ಮೊಬೈಲ್‌ನ ನೀಲಿ ಬೆಳಕಿನಿಂದಾಗಿ ಪ್ರತಿ ಬಾರಿಯೂ ಕಣ್ಣುಗಳಲ್ಲಿ ನೀರು ಸುರಿಯುತ್ತಿದ್ದರೆ ಇದಕ್ಕೆ ಅಲರ್ಜಿ ಕೂಡ ಕಾರಣವಿರಬಹುದು. ಇದರಿಂದಾಗಿ ಕಣ್ಣಿನಲ್ಲಿ ತುರಿಕೆ ಕೂಡ ಉಂಟಾಗುತ್ತದೆ. ತಕ್ಷಣವೇ ಚಿಕಿತ್ಸೆ ಪಡೆಯಬೇಕು.

ಕಣ್ಣುರೆಪ್ಪೆಗಳ ಊತ

ನಮ್ಮ ಕಣ್ಣುಗಳು ಆರೋಗ್ಯವಾಗಿರಬೇಕೆಂದು ಬಯಸಿದರೆ ಕಣ್ಣಿನ ರೆಪ್ಪೆಗಳನ್ನು ಜೋಪಾನ ಮಾಡುವುದು ಬಹಳ ಮುಖ್ಯ. ಕಣ್ಣಿನ ರೆಪ್ಪೆಗಳಲ್ಲಿ ಯಾವುದೇ ರೀತಿಯ ಊತ ಕಂಡುಬಂದರೆ, ಕಣ್ಣಿನಲ್ಲಿ ತುರಿಕೆ, ಕೊಳೆ ಮತ್ತು ನೀರು ಬರಲು ಪ್ರಾರಂಭಿಸುತ್ತದೆ.

ಸೋಂಕು

ಕಣ್ಣಿನಲ್ಲಿ ನೀರು ಬರಲು ಕಾರಣ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು ಕೂಡ ಆಗಿರಬಹುದು. ಈ ಕಾರಣದಿಂದಾಗಿ, ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ಅವುಗಳಲ್ಲಿ ನೀರು ಬರುತ್ತದೆ. ವಿಶೇಷವಾಗಿ ಈ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...