ಮನೆಯಲ್ಲಿಯೇ ತಯಾರಿಸಿದ ಮೀನಿನ ಖಾದ್ಯಗಳು ರುಚಿಯಾಗಿರುತ್ತವೆ. ಆದರೆ ಮೀನಿನ ವಾಸನೆ ಮನೆಯೆಲ್ಲಾ ತುಂಬಿ ಮುಜುಗರ ಉಂಟು ಮಾಡುತ್ತವೆ.
ಹೀಗಾಗಿ ಕೆಲವರು ಮೀನಿನ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಲು ಹಿಂಜರಿಯುತ್ತಾರೆ. ಆದರೆ ಮೀನಿನ ವಾಸನೆ ನಿವಾರಣೆಗೆ ಕೆಲವು ಸುಲಭ ವಿಧಾನಗಳಿವೆ.
* ಮೀನಿನ ವಾಸನೆ ನಿವಾರಣೆಗೆ ಬಿಳಿ ವಿನಿಗರ್ ಬೆಸ್ಟ್. ಮೀನನ್ನು ಬೇಯಿಸುವಾಗ ಸ್ಟವ್ ಪಕ್ಕ ಸಣ್ಣ ಬೌಲ್‌ನಲ್ಲಿ ಬಿಳಿ ವಿನಿಗರ್ ಇಡಿ. ವಿನಿಗರ್ ಮೀನಿನ ವಾಸನೆಯನ್ನು ಹೀರಿ ತಾಜಾ ಪರಿಮಳ ಬೀರುತ್ತದೆ.
* ನಿಂಬೆ ಹಣ್ಣಿನ ರಸ ಕೂಡಾ ಮೀನಿನ ವಾಸನೆ ನಿವಾರಿಸುತ್ತದೆ. ಒಂದು ಕಪ್ ನೀರಿಗೆ ಸ್ವಲ್ಪ ನಿಂಬೆ ರಸ ಹಾಕಿ ಅರ್ಧ ಗಂಟೆ ಕುದಿಸಿ. ಇದರ ಪರಿಮಳ ಮೀನಿನ ವಾಸನೆಯನ್ನು ಹೋಗಲಾಡಿಸುತ್ತದೆ.
ದೇಹದ ಕಲ್ಮಶ ಹೊರ ಹಾಕಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ….?
* ಸೇಬು ಹಣ್ಣನ್ನು ಕೂಡಾ ಮೀನಿನ ವಾಸನೆ ನಿವಾರಣೆಗೆ ಬಳಸಲಾಗುತ್ತದೆ. ಮೀನು ಫ್ರೈ ಮಾಡುವ ಮೊದಲು ಸೇಬಿನ ತೆಳ್ಳನೆಯ ಸ್ಲೈಸ್‌ಗಳಿಂದ ಫ್ರೈಯಿಂಗ್ ಪ್ಯಾನನ್ನು ಮೃದುವಾಗಿ ಉಜ್ಜಿ. ಇದರಿಂದ ಮೀನಿನ ವಾಸನೆ ಕಡಿಮೆಯಾಗುತ್ತದೆ.
* ಮೀನಿನ ಖಾದ್ಯ ಮಾಡಿದ ಮೇಲೆ ಕಿತ್ತಳೆ ಸಿಪ್ಪೆ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ನೀರಿಗೆ ಹಾಕಿ ಕುದಿಸಿದರೂ ದುರ್ನಾತ ದೂರವಾಗುತ್ತದೆ.
* ಅಡುಗೆ ಮನೆಯಲ್ಲಿ ಮೀನಿನ ವಾಸನೆ ಬರುತ್ತಿದ್ದರೆ ಒಂದು ಬೌಲ್ ಕುದಿಯುವ ನೀರಿಗೆ ಒಂದು ತುಂಡು ಚಕ್ಕೆ ಹಾಕಿ. ಇದರಿಂದ ಉತ್ತಮ ಪರಿಮಳ ಹೊರ ಹೊಮ್ಮುತ್ತದೆ.
* ಸಾಧ್ಯವಾದಷ್ಟು ತಾಜಾ ಮೀನುಗಳನ್ನೇ ತನ್ನಿ. ಮೀನು ಫ್ರೆಶ್ ಆಗಿದ್ದಷ್ಟು ವಾಸನೆ ಕಡಿಮೆಯಿರುತ್ತದೆ.