ಅಜ್ಜ ಹೊಸ ಚಪ್ಪಲಿ ಕೊಡಿಸದ್ದಕ್ಕೆ ಮನನೊಂದ ಮೊಮ್ಮಗ; ನೇಣು ಬಿಗಿದುಕೊಂಡು 10 ವರ್ಷದ ಬಾಲಕ ಸಾವಿಗೆ ಶರಣು

ಹೊಸ ಚಪ್ಪಲಿ ಕೊಡಿಸಲಿಲ್ಲ ಅನ್ನೋ ಕಾರಣಕ್ಕೆ ಮನನೊಂದು, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 10 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫೆಬ್ರವರಿ 13ರಂದು ಈ ಘಟನೆ ನಡೆದಿದೆ. ಬಾಲಕ ತನ್ನ ಅಜ್ಜ-ಅಜ್ಜಿ ಜೊತೆಗೆ ವಾಸಿಸುತ್ತಿದ್ದ. ಈ ಬಾಲಕನ ಪೋಷಕರು ಕೃಷಿ ಕಾರ್ಮಿಕರಾಗಿದ್ದು, ಪಕ್ಕದ ಗ್ರಾಮದಲ್ಲಿ ವಾಸವಾಗಿದ್ದಾರೆ.

ಬಾಲಕ ತನ್ನ ಹೆತ್ತವರನ್ನು ಭೇಟಿಯಾಗಲು ತೆರಳುತ್ತಿದ್ದ. ದಾರಿ ಮಧ್ಯೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೀರೆಯನ್ನು ಕುಣಿಕೆಯಾಗಿ ಬಳಸಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಬಾಲಕ ಹೊಸ ಚಪ್ಪಲಿ ಕೊಡಿಸುವಂತೆ ಕೇಳುತ್ತಿದ್ದ. ಆದರೆ ಹೊಸ ಚಪ್ಪಲಿ ಕೊಡಿಸಲು ಅಜ್ಜ ನಿರಾಕರಿಸಿದ್ದ. ಇದರಿಂದ ನೊಂದ ಬಾಲಕ ಹೆತ್ತವರನ್ನು ಭೇಟಿಯಾಗಲು ಹೋಗುವುದಾಗಿ ಹೇಳಿ ಹೊರಟಿದ್ದ. ಕ್ಷುಲ್ಲಕ ಕಾರಣಕ್ಕೆ ಸಾವಿನ ಮನೆ ಸೇರಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. 2020ರಲ್ಲಿ ಭಾರತದಲ್ಲಿ 1.53 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಯಿಂದ 22,207 ಸಾವು ಸಂಭವಿಸಿದೆ. ಕೌಟುಂಬಿಕ ಸಮಸ್ಯೆಗಳು, ನಿಂದನೆ, ಒಂಟಿತನದ ಭಾವನೆ, ಮಾನಸಿಕ ಅಸ್ವಸ್ಥತೆ, ವೃತ್ತಿ ಸಮಸ್ಯೆಗಳು, ಮದ್ಯದ ಚಟ, ಹಿಂಸೆ ಮತ್ತು ಆರ್ಥಿಕ ನಷ್ಟದಿಂದ ಜನರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read