ಸನಾತನ ಭಾರತೀಯ ಪರಂಪರೆಯಲ್ಲಿ ನಮಸ್ಕಾರಕ್ಕೆ ಮಹತ್ವದ ಸ್ಥಾನವಿದೆ. ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ನಮಸ್ತೆ, ನಮಸ್ಕಾರ ಹಾಗೂ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಸಂಪ್ರದಾಯದ ಹಿಂದೆ ಸಾಕಷ್ಟು ಲಾಭ ಅಡಗಿದೆ.
ನಮಸ್ಕಾರ ಮಾಡುವ ವ್ಯಕ್ತಿಯಿಂದ ನಕಾರಾತ್ಮಕ ವಿಚಾರ ಹಾಗೂ ನಕಾರಾತ್ಮಕ ಭಾವನೆ ದೂರವಾಗುತ್ತದೆ. ನಮಸ್ಕಾರ ಮಾಡುವ ವ್ಯಕ್ತಿ ಆನಂದ ಹೊಂದುತ್ತಾನೆ. ಇದನ್ನು ಆನಂದ ಮುದ್ರೆ ಎಂದು ಕರೆಯಲಾಗುತ್ತದೆ.
ಎರಡೂ ಕೈಗಳನ್ನು ಸೇರಿಸಿ ನಮಸ್ಕಾರ ಮಾಡುವುದರಿಂದ ದೇಹದಲ್ಲಿರುವ ಕೀಟಾಣುಗಳನ್ನು ನಾಶ ಮಾಡುವ ಹಾರ್ಮೋನು ಸಕ್ರಿಯವಾಗುತ್ತದೆ. ನರಗಳ ಶಕ್ತಿ ಹೆಚ್ಚಾಗುತ್ತದೆ.
ಎರಡೂ ಕೈ ಮುಗಿದಾಗ ಎರಡೂ ಕೈಗಳ ಮಧ್ಯೆ ಉತ್ಪತ್ತಿಯಾಗುವ ಶಕ್ತಿ ತರಂಗ ರೂಪದಲ್ಲಿ ಗೌರವ ಸಲ್ಲಿಸುವ ಅಥವಾ ನಾವು ನಮಸ್ಕರಿಸುವ ವ್ಯಕ್ತಿಯನ್ನು ತಲುಪುತ್ತದೆ.
ಹಿರಿಯ ವ್ಯಕ್ತಿಗೆ ನೀವು ನಮಸ್ಕರಿಸಿದಾಗ ನಿಮ್ಮ ತಲೆ ಮೇಲೆ ಕೈ ಇಟ್ಟು ಅವರು ಆಶೀರ್ವಾದ ಮಾಡಿದ್ರೆ ಅವರ ಶಕ್ತಿ ನಿಮ್ಮ ದೇಹ ಸೇರುತ್ತದೆ.