ವ್ಯಕ್ತಿಯೋರ್ವ ತನ್ನ ಲಿವ್ ಇನ್ ಸಂಗಾತಿಯನ್ನೇ ಹತ್ಯೆಗೈದು ಬಳಿಕ ಶವ್ವನ್ನು ಮಂಚದ ಬಾಕ್ಸ್ ನಲ್ಲಿ ತುಂಬಿಟ್ಟ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ.
ಸರನ್ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಹರ್ ಕಾಲೋನಿಯಲ್ಲಿ ಕಳೆದ 10 ವರ್ಷಗಳಿಂದ ಜಿತೇಂದ್ರ ಮಹಿಳೆಯೊಂದಿಗೆ ಲಿವಿನ್ ಸಂಬಂದದಲ್ಲಿದ್ದ. ಏಕಾಏಕಿ ಮಹಿಳೆಯನ್ನು ವ್ಯಕ್ತಿ ಕೊಲೆ ಮಾಡಿದ್ದು, ಬಳಿಕ ಆಕೆಯ ಶವವನ್ನು ಮಲಗುವ ಮಂಚದ ಕೆಳಗಿನ ಬಾಕ್ಸ್ ನಲ್ಲಿ ತುಂಬಿಟ್ಟಿದ್ದ.
ಶವದ ವಾಸನೆ ಬರರಾಬರೆಂದು ಮನೆಯಲ್ಲಿ ಧೂಪ, ಊದಿನ ಕಡ್ಡಿಯ ಹೊಗೆಯನ್ನು ನಿರಂತರವಾಗಿ ಹಾಕುತ್ತಲೇ ಇದ್ದ. ಕೊಲೆ ಬಳಿಕ ವ್ಯಕ್ತಿ ಮಹಿಳೆಯನ್ನು ತಾನು ಕೊಂದಿದ್ದಾಗಿ ತನ್ನ ಅಜ್ಜಿಯ ಬಳಿ ಹೋಗಿ ಹೇಳಿದ್ದ. ಗಾಬರಿಯಾಅದ ಅಜ್ಜಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬೀಗ ಮುರಿದು ಮಂಚದ ಬಾಕ್ಸ್ ನಲ್ಲಿಟ್ಟಿದ್ದ ಶವನ್ನು ಹೊರತೆಗೆದಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನಿಗಾಗು ಹುಡುಕಾಟ ನಡೆಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಜಿತೇಂದ್ರ ಬೇರೆ ಇದ್ದು ಮಹಿಳೆಯೊಬ್ಬಳ ಜೊತೆ ಲಿವಿನ್ ಸಂಬಂಧ ಹೊಂದಿದ್ದ. ಹತ್ತು ವರ್ಷಗಳಲ್ಲಿ ಈವರೆಗೂ ಒಮ್ಮೆಯೂ ಆತ ಅಜ್ಜಿ ಜೊತೆ ಮಾತನಾಡಿರಲಿಲ್ಲ. ಈಗ ತನ್ನ ಜೊತೆ ಇದ್ದ ಮಹಿಳೆಯನ್ನು ಕೊಂದಿದ್ದಾಗಿ ಹೇಳಿ ಹೋಗಿದ್ದ. ಸದ್ಯ ನಾಪತ್ತೆಯಗೈರುವ ಆರೋಪಿಗಾಗಿ ಬಲೆ ಬೀಸಲಾಗಿದೆ.