ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಬೇಡಿಕೆ ಹೆಚ್ಚಿದ ಕಾರಣ ಬೆಲೆ ಏರಿಕೆ, ಹಣ ಕೊಟ್ಟರೂ ಸಿಗ್ತಲ್ಲ ಮದ್ಯ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮದ್ಯಕ್ಕೆ ಬೇಡಿಕೆ ಭಾರಿ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದ ಪರಿಣಾಮ ಕಲವು ಕಡೆ ಮದ್ಯದ ದರ ಕೂಡ ಹೆಚ್ಚಾಗಿದ್ದು, ಹಣ ಕೊಟ್ಟರೂ ಬೇಡಿಕೆಗೆ ತಕ್ಕಂತೆ ಮದ್ಯ ಸಿಗುತ್ತಿಲ್ಲ.

ವಿಧಾನಸಭೆ ಚುನಾವಣೆ ಕಾರಣ ಮದ್ಯಕ್ಕೆ ಬೇಡಿಕೆ ಭಾರಿ ಹೆಚ್ಚಾಗಿದೆ. ಹೆಂಡದ ಹೊಳೆ ಹರಿಯತೊಡಗಿದ್ದು, ದಾಸ್ತಾನು, ಸಾಗಾಣೆ, ವಹಿವಾಟು ಕೂಡ ಹೆಚ್ಚಾಗಿದೆ. ಬೆಂಬಲಿಗರು ಕಾರ್ಯಕರ್ತರಿಗೆ ರಾಜಕೀಯ ನಾಯಕರು ಬಾಡೂಟ ಮದ್ಯದ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಮದ್ಯಕ್ಕೆ ಶೇಕಡ 20ರಷ್ಟು ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.

ಚುನಾವಣೆ ನೀತಿ ಸಮಿತಿಯ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸಿಗುತ್ತಿಲ್ಲ. ಹೊರ ರಾಜ್ಯಗಳಿಂದ ಕದ್ದು ಮುಚ್ಚಿ ಮದ್ಯ ತರಿಸಿ ಮಾರಾಟ ಮಾಡುಲಾಗುತ್ತಿದೆ. ಕೆಲವೆಡೆ ಅಪಾರ ಪ್ರಮಾಣದ ಮದ್ಯ ಜಪ್ತಿ ಮಾಡಲಾಗಿದೆ. ಸದ್ಯ ಶೇಕಡ 70ರಷ್ಟು ಮದ್ಯ ದಾಸ್ತಾನು ಇದ್ದು, ಜಿಲ್ಲೆಗಳಲ್ಲಿ ಶೇಕಡ 20ರಷ್ಟು ಪೂರೈಕೆ ಕಡಿಮೆಯಾಗಿದೆ. ಬಿಯರ್ ಬೆಲೆ ಶೇಕಡ 10 ರಿಂದ 15 ರಷ್ಟು ಹೆಚ್ಚಾಗಿದೆ. ಮದ್ಯದ ಬೆಲೆ ಹೆಚ್ಚಾಗಿದ್ದರೂ, ಖರೀದಿ ಕಡಿಮೆಯಾಗಿಲ್ಲ. ಬೇಡಿಕೆ ಹೆಚ್ಚುತ್ತಲೇ ಇದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read