ಮದ್ಯಪ್ರಿಯರಿಗೆ ಶಾಕ್: ಅಧಿಕ ರಾಜಸ್ವ ಸಂಗ್ರಹ ಗುರಿಯೊಂದಿಗೆ ಬೇರೆ ರಾಜ್ಯಗಳ ಬೆಲೆಗೆ ಅನುಗುಣವಾಗಿ ದರ ಪರಿಷ್ಕರಣೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಮತ್ತೆ ಮದ್ಯದ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಲಾಗಿದೆ.

ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಎಂಐಎಲ್ ಮತ್ತು ಬಿಯರ್ ಸ್ಲ್ಯಾಬ್ ಗಳನ್ನು ಪರಿಷ್ಕರಿಸಲಾಗುತ್ತದೆ. ಕಳೆದ ಸಾಲಿಗಿಂತ 2525 ಕೋಟಿ ರೂ. ಅಧಿಕ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. 2023 -24 ರಲ್ಲಿ ಅಬಕಾರಿ ಇಲಾಖೆಯಿಂದ 36,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದ್ದು, ಜನವರಿ ಅಂತ್ಯದವರೆಗೆ 28,181 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ.

ಬೇರೆ ರಾಜ್ಯಗಳ ಬೆಲೆಗೆ ಅನುಗುಣವಾಗಿ ಮದ್ಯದ ಬೆಲೆಗಳನ್ನು ಕರ್ನಾಟಕದಲ್ಲಿಯೂ ಪರಿಷ್ಕರಿಸುವುದರಿಂದ 2024 -25 ನೇ ಸಾಲಿಗೆ 38,525 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ. ಇದರೊಂದಿಗೆ ಅಬಕಾರಿ ಇಲಾಖೆಯ ಎಲ್ಲಾ ಸೇವೆ ಡಿಜಿಟಲ್ ಮಾಡಲಿದ್ದು, ಇಲಾಖೆ ಒದಗಿಸುವ ಎಲ್ಲಾ ಸೇವೆಗಳಿಗೆ ಸಮಯದ ಮಿತಿ ನಿಗದಿಪಡಿಸಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read