SHOCKING : ವಿದ್ಯುತ್ ಪ್ರವಹಿಸಿ ಕಂಬದಲ್ಲೇ ‘ಲೈನ್ ಮ್ಯಾನ್’ ಸಜೀವ ದಹನ : ಭಯಾನಕ ವಿಡಿಯೋ ವೈರಲ್.!

ವಿದ್ಯುತ್  ಪ್ರವಹಿಸಿ  ಕಂಬದಲ್ಲೇ ಲೈನ್ ಮ್ಯಾನ್ ಸಜೀವ ದಹನರಾದ ಭಯಾನಕ ಘಟನೆಯ ವಿಡಿಯೋವೊಂದು ಭಾರಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ರಾಜ್ಕಾಪುರ ಪ್ರದೇಶದಲ್ಲಿ ಘಟನೆ ನಡೆದಿದೆ.ವಿದ್ಯುತ್ ಸಂಪರ್ಕ ತೆಗೆಯದೆ ಬಲ್ಬ್ ಅನ್ನು ಸರಿಪಡಿಸಲು ಯತ್ನಿಸಿದಾಗ ವಿದ್ಯುತ್ ತಂತಿ ಲೈನ್ ಮ್ಯಾನ್ ಗೆ ತಗುಲಿದೆ ಎನ್ನಲಾಗಿದೆ. ವಿದ್ಯುತ್ ಕಂಬದ ಮೇಲೆ ಲೈನ್ ಮ್ಯಾನ್ ಸುಟ್ಟುಹೋಗಿದ್ದಾನೆ.

ಭಯಭೀತರಾದ ಜನರು ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ತಕ್ಷಣ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದರು. ನಂತರ ಲೈನ್ ಮ್ಯಾನ್ ಶವವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read