ನವದೆಹಲಿ : ಇನ್ಮುಂದೆ ವಿಮಾನ, ಬಸ್ ರೀತಿ ರೈಲಿನಲ್ಲೂ ಬಯಸಿದ ಆಸನ ಸಿಗಲಿದ್ದು, ಡಿಸೆಂಬರ್ ವೇಳೆಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಭಾರತೀಯ ರೈಲ್ವೆಯು ಡಿಸೆಂಬರ್ 2025 ರ ವೇಳೆಗೆ ಟಿಕೆಟ್ ಬುಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಆಧುನೀಕೃತ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು (PRS) ಪರಿಚಯಿಸಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ತಮ್ಮಿಷ್ಟದ ಸೀಟು ಆಯ್ಕೆ ಮಾಡು ಅವಕಾಶವನ್ನು ರೈಲ್ವೇ ಇಲಾಖೆ ಜನರಿಗೆ ನೀಡಲಿದೆ. ಇದುವರೆಗೆ ರೈಲಿನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವಾಗ ಬೇಕಾದ ಸೀಟು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಲಿಲ್ಲ. ಯಾವ ಸೀಟು ಖಾಲಿ ಇದೆ ಎಂಬ ಮಾಹಿತಿ ಕೂಡ ಸಿಗುತ್ತಿರಲಿಲ್ಲ. ಇನ್ಮುಂದೆ ಪ್ರಯಾಣಿಕರಿಗೆ ಇಷ್ಟವಾದ ಸೀಟು ಆಯ್ಕೆ ಮಾಡಿಕೊಳ್ಳಬಹುದು.
ಹೊಸ ವ್ಯವಸ್ಥೆಯು ಟಿಕೆಟ್ ವಿಚಾರಣೆ ಸಾಮರ್ಥ್ಯವನ್ನು ನಿಮಿಷಕ್ಕೆ ನಾಲ್ಕು ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಲಿದೆ ಎಂದು ಸಚಿವಾಲಯ ತಿಳಿಸಿದೆ. “ಹೊಸ PRS ನಲ್ಲಿ, ಬಳಕೆದಾರರು ತಮ್ಮ ಸೀಟಿನ ಆಯ್ಕೆಯನ್ನು ಸಲ್ಲಿಸಲು ಮತ್ತು ದರದ ಕ್ಯಾಲೆಂಡರ್ ಅನ್ನು ನೋಡಲು ಸಾಧ್ಯವಾಗುತ್ತದೆ” ಎಂದು ಪ್ರಕಟಣೆ ತಿಳಿಸಿದೆ. ಸೀಟುಗಳನ್ನು ಆಯ್ಕೆ ಮಾಡುವ ಸಾಮರ್ಥ್ಯವು ಪ್ರಸ್ತುತ ವೈಶಿಷ್ಟ್ಯಕ್ಕಿಂತ ಹೇಗೆ ಭಿನ್ನವಾಗಿರುತ್ತದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಇದು ದಿವ್ಯಾಂಗರು, ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಸಂಯೋಜಿತ ಸೌಲಭ್ಯಗಳನ್ನು ಸಹ ಹೊಂದಿರುತ್ತದೆ.