ರಾಮನಗರ: ಬಿಡದಿ ಸಮೀಪದ ಉರಗಹಳ್ಳಿ ಕ್ರಷರ್ ನಲ್ಲಿ ಕಲ್ಲು ಬಂಡೆ ಸಿಡಿಸಲು ಅಳವಡಿಸುತ್ತಿದ್ದ ಜಿಲೆಟಿನ್ ಸ್ಪೋಟಗೊಂಡು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಪೋಟದ ತೀವ್ರತೆಗೆ ಒಬ್ಬನ ಕಾಲು ತುಂಡಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಾರ್ಖಂಡ್ ಮೂಲದ ಕಿಶನ್(45) ಮೃತಪಟ್ಟ ಕಾರ್ಮಿಕ. ಪ್ರಸಾದ್ ಕಾಲು ತುಂಡಾಗಿದೆ. ವಿಶಾಲ್ ಕುಮಾರ್ ಮತ್ತು ಅನ್ಸಾರಿ ಎಂಬುವವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉರಾಗಹಳ್ಳಿ ಸಮೀಪ ಕ್ರಷರ್ ನಲ್ಲಿ ಶುಕ್ರವಾರ ಸಂಜೆ ಕಿಶನ್ ಸೇರಿದಂತೆ ನಾಲ್ವರು ಬಂಡೆಗಳನ್ನು ಸಿಡಿಸಲು ಸಿದ್ಧತೆ ಮಾಡಿಕೊಂಡಿದ್ದರು. ಮಳೆ ವಾತಾವರಣ ಇದ್ದ ಕಾರಣ ಬೇಗನೆ ಕೆಲಸ ಮುಗಿಸಲು ಸಿದ್ಧತೆ ಮಾಡಿಕೊಳ್ಳುವಾಗಲೇ ಮಳೆ ಬಂದು ಸಿಡಿಲು ಬಡಿದು ಜಿಲೆಟಿನ್ ಸ್ಪೋಟಗೊಂಡು ದುರಂತ ಸಂಭವಿಸಿದೆ.