alex Certify ಸೂರ್ಯೋದಯಕ್ಕಿಂತ ಮೊದಲು ಹಾಸಿಗೆ ಬಿಟ್ರೆ ಇದೆ ಇಷ್ಟೆಲ್ಲ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯೋದಯಕ್ಕಿಂತ ಮೊದಲು ಹಾಸಿಗೆ ಬಿಟ್ರೆ ಇದೆ ಇಷ್ಟೆಲ್ಲ ಲಾಭ

ಸೂರ್ಯೋದಯಕ್ಕಿಂತ ಮೊದಲು ಏಳಬೇಕೆಂದು ಹಿರಿಯರು ಹೇಳ್ತಾರೆ. ಬೆಳಗಿನ ತಾಜಾ ಗಾಳಿ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ. ಸಾಮಾನ್ಯವಾಗಿ ಈಗಿನ ಯುವಜನತೆ ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳ್ತಾರೆ. ಬೆಳಿಗ್ಗೆ ಬೇಗ ಏಳುವುದ್ರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಬೆಳಿಗ್ಗೆ ಬೇಗ ಎದ್ದಲ್ಲಿ ಮೊದಲನೆಯದಾಗಿ ನಿಮಗೆ ಸಾಕಷ್ಟು ಸಮಯ ಸಿಗುತ್ತದೆ. ಬೆಳಿಗ್ಗೆ ತರಾತುರಿಯಲ್ಲಿ ಓಡುವ ಅವಶ್ಯಕತೆಯಿರುವುದಿಲ್ಲ. ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ನಿಧಾನವಾಗಿ ಎಲ್ಲ ಕೆಲಸಗಳನ್ನು ಮಾಡಬಹುದು. ಹಾಗೆ ಮುಂದೆ ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧಪಡಿಸಬಹುದು. ಬೆಳಿಗ್ಗೆ ಮನಸ್ಸು ಶಾಂತವಾಗಿರುವುದ್ರಿಂದ ಕೆಲಸದ ವೇಗ ಹೆಚ್ಚಿರುತ್ತದೆ.

ಬೆಳಿಗ್ಗೆ ಬೇಗ ಎದ್ದಲ್ಲಿ ಆರೋಗ್ಯಕರ ಉಪಹಾರವನ್ನು ಸೇವಿಸಬಹುದು. ಹಾಸಿಗೆಯಿಂದ ಬೇಗ ಎದ್ದಲ್ಲಿ ಆರೋಗ್ಯಕರ ಆಹಾರ ತಯಾರಿಸಲು ಸಮಯ ಸಿಗುತ್ತದೆ. ಉಪಹಾರ ತಪ್ಪಿಸಿದಲ್ಲಿ ದೇಹ ಶಕ್ತಿ ಕಳೆದುಕೊಳ್ಳುತ್ತದೆ. ದಿನಪೂರ್ತಿ ದೇಹದಲ್ಲಿ ಶಕ್ತಿ ಇರಬೇಕೆಂದ್ರೆ ಬೆಳಕಿನ ಆಹಾರ ಸರಿಯಾಗಿರಬೇಕು.

ಬೇಗ ಎದ್ದೇಳುವುದ್ರಿಂದ ಯಾವುದೇ ಒತ್ತಡ ಕಾಡುವುದಿಲ್ಲ. ಶುದ್ಧ ಗಾಳಿ ಸಕಾರಾತ್ಮಕ ಆಲೋಚನೆಯನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಆಲೋಚನೆ ಕಡಿಮೆಯಾಗುವುದ್ರಿಂದ ಅನವಶ್ಯಕ ಒತ್ತಡ ಕಡಿಮೆಯಾಗುತ್ತದೆ. ಬೇಗನೆ ಎದ್ದೇಳುವ ಜನರು ಅಲ್ಪಾವಧಿಯಲ್ಲಿ ಮಾತ್ರವಲ್ಲ ಜೀವನದುದ್ದಕ್ಕೂ ಸಂತೋಷವಾಗಿರುತ್ತಾರೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಬೇಗನೆ ಎದ್ದೇಳುವ ಅಭ್ಯಾಸದಿಂದಾಗಿ ರಾತ್ರಿಯಲ್ಲಿ ಉತ್ತಮ ನಿದ್ರೆ ಬರುತ್ತದೆ. ಇದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.

ಬೆಳಿಗ್ಗೆ ವ್ಯಾಯಾಮ ಮಾಡುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ ಬೇಗ ಎದ್ದಲ್ಲಿ ನಿಮಗೆ ವ್ಯಾಯಾಮ ಮಾಡಲು ಸಮಯ ಸಿಗುತ್ತದೆ. ಎಲ್ಲ ವ್ಯಾಯಾಮಗಳನ್ನು ನೀವು ಮಾಡಬಹುದು. ಬೆಳಿಗ್ಗೆ ತಡವಾಗಿ ಎದ್ದಲ್ಲಿ ಸಂಜೆ ವ್ಯಾಯಾಮ ಮಾಡಲು ಕೆಲಸದ ಮಧ್ಯೆ ಸಮಯ ಹೊಂದಿಸಿಕೊಳ್ಳಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...