ಇದು ಮಳೆಗಾಲ. ಹೊರಗೆ ಮಳೆ ಬರ್ತಿದ್ದರೆ ಒಳಗೆ ರುಚಿ ರುಚಿ ಆಹಾರ ಸೇವನೆ ಮಾಡಲು ಮನಸ್ಸು ಬಯಸುತ್ತದೆ. ಸದಾ ಚಿಪ್ಸ್, ಪಾನಿಪುರಿ, ಮಸಾಲೆಪುರಿ ತಿಂದು ಬೇಸರವಾಗಿದ್ದರೆ ಈ ಬಾರಿ ಟೊಮೊಟೊ ಚಾಟ್ ಪ್ರಯತ್ನಿಸಿ.
ಟೊಮೊಟೊ ಚಾಟ್ ಗೆ ಬೇಕಾಗುವ ಪದಾರ್ಥ :
ಕತ್ತರಿಸಿದ 4 ಟೊಮಾಟೊ
1/2 ಕಪ್ ಬೇಯಿಸಿದ ಬಿಳಿ ಬಟಾಣಿ
ಬೇಯಿಸಿದ ಆಲೂಗಡ್ಡೆ
ಕತ್ತರಿಸಿದ ಈರುಳ್ಳಿ
ಒಂದು ಚಮಚ ಕತ್ತರಿಸಿದ ಶುಂಠಿ
ಮೂರರಿಂದ ನಾಲ್ಕು ಕತ್ತರಿಸಿದ ಹಸಿರು ಮೆಣಸಿನಕಾಯಿ
ಕತ್ತರಿಸಿದ ಕೊತ್ತಂಬರಿ
ಒಂದು ಚಮಚ ನಿಂಬೆ ರಸ
1 ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
1/2 ಚಮಚ ಕಪ್ಪು ಉಪ್ಪು
ಒಂದು ಟೀಚಮಚ ಜೀರಿಗೆ ಪುಡಿ
1/2 ಚಮಚ ಗರಂ ಮಸಾಲ
1 ಚಮಚ ಹುಣಸೆ ಚಟ್ನಿ
1/2 ಚಮಚ ಕೊತ್ತಂಬರಿ ಚಟ್ನಿ
ರುಚಿಗೆ ತಕ್ಕಷ್ಟು ಉಪ್ಪು
4 ಚಮಚ ಎಣ್ಣೆ
ಟೊಮೊಟೊ ಚಾಟ್ ಮಾಡುವ ವಿಧಾನ :
ಮೊದಲು ಬಾಣಲೆಗೆ ಮೂರು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಶುಂಠಿ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ. ಈರುಳ್ಳಿ ಗುಲಾಬಿ ಬಣ್ಣ ಬರುವವರೆಗೆ ಹುರಿಯಿರಿ. ಟೊಮೆಟೊ ಮತ್ತು ಅರ್ಧ ಚಮಚ ಉಪ್ಪು ಸೇರಿಸಿ. ಐದು ನಿಮಿಷಗಳ ಕಾಲ ಬೇಯಿಸಿ. ನಂತರ ಗರಂ ಮಸಾಲೆ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಸೇರಿಸಿ. ಎರಡರಿಂದ ಮೂರು ನಿಮಿಷಗಳ ಕಾಲ ಹುರಿಯಿರಿ. ಇದಕ್ಕೆ ಆಲೂಗಡ್ಡೆ ಸೇರಿಸಿ ಎರಡು ನಿಮಿಷ ಫ್ರೈ ಮಾಡಿ.
ನಂತರ ಬೇಯಿಸಿದ ಬಟಾಣಿ, ಅರ್ಧ ಕಪ್ ನೀರು ಸೇರಿಸಿ ಮತ್ತು ಎರಡು ನಿಮಿಷ ಬೇಯಿಸಿ. ರುಚಿಗೆ ತಕ್ಕಂತೆ ಹಸಿರು ಚಟ್ನಿ, ಹುಣಸೆ ಹಣ್ಣಿನ ಚಟ್ನಿ, ಹಸಿರು ಕೊತ್ತಂಬರಿ ಮತ್ತು ಕಪ್ಪು ಉಪ್ಪನ್ನು ಸೇರಿಸಿ ಗ್ಯಾಸ್ ಬಂದ್ ಮಾಡಿ. ಇದನ್ನು ಸರ್ವಿಂಗ್ ಬೌಲ್ ಗೆ ಹಾಕಿ ಅದರ ಮೇಲೆ ಕತ್ತರಿಸಿದ ಈರುಳ್ಳಿ,ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.