ಮಹಾಶಿವರಾತ್ರಿಯಂದು ಹೀಗಿರಲಿ ʼಶಿವನ ಆರಾಧನೆʼ

ಫೆ. 18ರಂದು ಮಹಾಶಿವರಾತ್ರಿ ಆಚರಿಸಲಾಗ್ತಿದೆ. ಶಿವರಾತ್ರಿ ದಿನ ಭಗವಂತ ಶಂಕರ ಎಲ್ಲೆಲ್ಲಿ ಶಿವಲಿಂಗವಿದ್ಯೋ ಅಲ್ಲಿಗೆ ಬರ್ತಾನೆಂಬ ನಂಬಿಕೆಯಿದೆ. ಆ ದಿನ ಶಿವ ಹಾಗೂ ಪಾರ್ವತಿಯ ಮದುವೆಯಾಗಿತ್ತು. ಇದೇ ದಿನ ಮೊದಲ ಬಾರಿ ಶಿವಲಿಂಗ ಪ್ರಕಟವಾಗಿತ್ತೆಂಬ ನಂಬಿಕೆಯೂ ಇದೆ.

ಭಗವಂತನ ಭಕ್ತರು ಇಡೀ ದಿನ ಉಪವಾಸ ಮಾಡಬೇಕು. ಭೋಲೆನಾಥನ ಸ್ಮರಣೆ ಮಾಡಬೇಕು. ಬೇಗ ಎದ್ದು ಸ್ನಾನ ಮಾಡಿ ಭಸ್ಮವನ್ನು ಹಚ್ಚಿಕೊಂಡು ರುದ್ರಾಕ್ಷಿ ಧರಿಸಬೇಕು. ನಂತ್ರ ಉತ್ತರ ದಿಕ್ಕಿಗೆ ಮುಖ ಮಾಡಿ ಶಿವನ ಆರಾಧನೆ ಮಾಡಬೇಕು. ‘ಓಂ ನಮಃ ಶಿವಾಯ’ ಮತ್ತು ‘ಶಿವಾಯ ನಮಃ’ ಮಂತ್ರ ಜಪಿಸಬೇಕು.

ಶಿವರಾತ್ರಿಯಂದು ಶಿವ ಭಕ್ತರು ಭಕ್ತಿಯಿಂದ ಪೂಜೆ ಮಾಡ್ತಾರೆ. ಆದ್ರೆ ಈ ವೇಳೆ ಮಾಡುವ ಕೆಲ ತಪ್ಪುಗಳು ಶಂಕರನ ಕೋಪಕ್ಕೆ ಕಾರಣವಾಗುತ್ತದೆ. ಶಿವರಾತ್ರಿಯಂದು ವೃತ ಮಾಡಿ ಶಿವನ ಕೃಪೆಗೆ ಪಾತ್ರರಾಗಬಯಸುವವರು ಕಪ್ಪು ಬಣ್ಣದ ಬಟ್ಟೆಯನ್ನು ಅಪ್ಪಿತಪ್ಪಿಯೂ ಧರಿಸಬೇಡಿ.

ಶಿವಲಿಂಗಕ್ಕೆ ಎಂದೂ ಶಂಖದಿಂದ ಜಲವನ್ನು ಅರ್ಪಿಸಬೇಡಿ. ತುಳಸಿಯನ್ನೂ ಪೂಜೆಗೆ ಬಳಸಬೇಡಿ. ಹಾಗೆ ಶಿವನ ಆರಾಧನೆ ವೇಳೆ ಸಾಸಿವೆಯನ್ನು ಎಂದೂ ಬಳಸಬೇಡಿ.

ಭಗವಂತ ಶಿವನಿಗೆ ಎಂದೂ ತುಂಡಾಗಿರುವ ಅಕ್ಕಿಯನ್ನು ನೀಡಬೇಡಿ. ಶಿವರಾತ್ರಿಯಂದು ಶಿವಲಿಂಗಕ್ಕೆ ಎಳನೀರನ್ನು ಅರ್ಪಿಸಬೇಡಿ. ತೆಂಗಿನಕಾಯಿ ಶಿವನ ಪೂಜೆಗೆ ನೀಡಬಹುದು. ಕುಂಕುಮ ಹಾಗೂ ಅರಿಶಿನವನ್ನು ಶಿವನಿಗೆ ಅರ್ಪಿಸಬಾರದು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮುರಿದಿರಬಾರದು. ಶಿವನ ಆರಾಧನೆ ವೇಳೆ ಅನೇಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಲ್ಲವಾದ್ರೆ ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read