ಬಿಜೆಪಿ ಸರ್ಕಾರ ತನ್ನ ದಿನಗಳನ್ನು ಎಣಿಸಲಿ, ನಾವು ಜಾತಿ ಗಣತಿ ಮಾಡುತ್ತೇವೆ : ಕಾಂಗ್ರೆಸ್

ಬೆಂಗಳೂರು : ಬಿಜೆಪಿ ಸರ್ಕಾರ ತನ್ನ ದಿನಗಳನ್ನು ಎಣಿಸಲಿ, ನಾವು ಜಾತಿ ಗಣತಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ನಲ್ಲಿ ಉಲ್ಲೇಖಿಸಿದ ಕಾಂಗ್ರೆಸ್ ಇತ್ತೀಚೆಗೆ ಪ್ರಧಾನಿಗಳು ದೇಶದಲ್ಲಿ ಕೇವಲ ಎರಡು ಜಾತಿಗಳಿವೆ ಅದು ಶ್ರೀಮಂತರು ಮತ್ತು ಬಡವರು ಎಂದು ಹೇಳುತ್ತಿದ್ದಾರೆ! ಹಿಂದುಳಿದವರು, ದಲಿತರು ಮತ್ತು ಬುಡಕಟ್ಟು ಜನಾಂಗದವರು ಯಾರೂ ಇಲ್ಲದಿರುವಾಗ, ಮೋದಿಯವರು ಇಷ್ಟು ವರ್ಷಗಳ ಕಾಲ ತಮ್ಮನ್ನು ಒಬಿಸಿ ಎಂದು ಏಕೆ ಕರೆದುಕೊಂಡರು? ಹಾಗಾಗಿ ಈಗ ಗಾಳಿ ಮಾತಲ್ಲ – ಗಣತಿಯಾಗಲಿದೆ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ಒಂದು ಗಣತಿ ಅಗಲಿದೆ, ದುರ್ಬಲ ಮತ್ತು ವಂಚಿತರನ್ನು ಮುಖ್ಯವಾಹಿನಿಗೆ ತರಲು ಒಂದು ಎಣಿಕೆ ನಡೆಯಲಿದೆ, ಬಿಜೆಪಿ ಸರ್ಕಾರ ತನ್ನ ದಿನಗಳನ್ನು ಎಣಿಸಲಿ, ನಾವು ಜಾತಿ ಗಣತಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

https://twitter.com/INCKarnataka/status/1754075098829705412

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read