ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಎಲ್ ಇಟಿ ಕಮಾಂಡರ್ ಸೈಫುಲ್ಲಾ ಖಾಲಿದ್ ನ ಹತ್ಯೆ ನಡೆದಿದೆ. ಆತನ ಮನೆಯ ಬಳಿಯೇ ಅಪರಿಚಿತರು ಸೈಫುಲ್ಲಾ ಖಾಲಿದ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ರಾಂಪುರ ಸಿಆರ್ ಪಿಎಫ್ ಕ್ಯಾಂಪ್ ಮೇಲಿನ ದಾಳಿ, ಬೆಂಗಳೂರಿನ IISc ಮೇಲೆ ನಡೆದ ದಾಳಿಯ ಸಂಚುಕೋರ, 2006ರಲ್ಲಿ ನಾಗ್ಪುರ ಆರ್.ಎಸ್.ಎಸ್ ಕಚೇರಿ ಮೇಲಿನ ದಾಳಿಯ ರೂವಾರಿಯಾಗಿದ್ದ ಉಗ್ರ, ಎಲ್ ಇಟಿ ಕಮಾಂಡರ್ ಸೈಫುಲ್ಲಾ ಖಾಲೀದ್ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಸಿಂಧ್ ಪ್ರಾಂತ್ಯದ ಆತನ ಮನೆಯ ಬಳಿಯೇ ಸೈಫುಲ್ಲಾ ಖಾಲಿದ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.