ಎಮ್ಮೆಗಳ ಹಿಂಡಿಗೆ ನುಗ್ಗಿ ಕರುವನ್ನು ಎತ್ತೊಯ್ದ ಚಿರತೆ: ವಿಡಿಯೋ ವೈರಲ್​

ವನ್ಯಮೃಗಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಚಿರತೆಯ ಬೇಟೆಗೆ ಸಂಬಂಧಪಟ್ಟದ್ದಾಗಿದೆ.
ಕಾಡಿನ ಅಂಚಿನಿಂದ ಚಿರತೆಯೊಂದು ಎಮ್ಮೆಯ ಕರುವನ್ನು ಹಿಡಿದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಕಾರುಗಳಲ್ಲಿ ಚಲಿಸುತ್ತಿದ್ದವರು ಅಲ್ಲಿಯೇ ಕಾರನ್ನು ನಿಲ್ಲಿಸಿ ಇದರ ವಿಡಿಯೋ ಮಾಡಿದ್ದಾರೆ. ಎಮ್ಮೆಗಳ ಹಿಂಡಿಗೆ ಚಿರತೆ ನುಗ್ಗಿ ಕರುವನ್ನು ಬಾಯಿಯಲ್ಲಿ ಹಿಡಿದು ಓಡಿಹೋಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.

ವೈಲ್ಡ್‌ಲೈಫ್ ಸ್ಟೋರೀಸ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ “ಎಮ್ಮೆ ಹಿಂಡಿಗೆ ಚಿರತೆ ದಾಳಿ ಮಾಡಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕರುವನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಕಂಡ ಎಮ್ಮೆಗಳು ಚಿರತೆಯನ್ನು ಬೆನ್ನಟ್ಟಿಕೊಂಡು ಹೋಗುತ್ತವೆ. ಇಷ್ಟು ಮಾತ್ರ ವಿಡಿಯೋದಲ್ಲಿ ನೋಡಬಹುದು.

ಆದರೆ ಈ ವಿಡಿಯೋ ನೋಡಿದರೆ ಎಮ್ಮೆಯ ಕರು ಬದುಕುಳಿದಂತೆ ತೋರುತ್ತಿಲ್ಲ. ಚಿರತೆ ರಭಸದ ವೇಗದಲ್ಲಿ ಹೋಗಿದಂತೆ ತೋರುತ್ತಿದೆ, ಇದನ್ನೇ ನೆಟ್ಟಿಗರೂ ಬರೆದಿದ್ದಾರೆ.

https://youtu.be/pNb-9EjBCLI

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read