ಬೆಚ್ಚಿಬೀಳಿಸುವಂತಿದೆ ಹೊಂಚು ಹಾಕಿ ಸಾಕುನಾಯಿಯನ್ನು ಕೊಂದ ಚಿರತೆ ವಿಡಿಯೋ

ಬೆಂಗಳೂರು, ನೋಯಿಡಾ, ಮುಂಬೈ ಬಳಿಕ ಇದೀಗ ಪುಣೆಯಲ್ಲೂ ಚಿರತೆ ಕಾಣಿಸಿಕೊಂಡಿದೆ. ಸಾಕು ನಾಯಿಯೊಂದನ್ನು ಕೊಂದು ಅದನ್ನು ಎತ್ತಿಕೊಂಡು ಓಡಿಹೋಗಿದೆ ಚಿರತೆ.

ರೈತರೊಬ್ಬರಿಗೆ ಸೇರಿದ ನಾಯಿಗೆ ಚಿರತೆ ಹೀಗೆ ಮಾಡಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಮನೆಯಂಗಳದಲ್ಲಿ ಮಲಗಿರುವ ನಾಯಿಯನ್ನು ಅದಕ್ಕೆ ಗೊತ್ತೇ ಆಗದಂತೆ ಬಂದು ಅದನ್ನು ಕೊಲ್ಲುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ನಾಯಿಯನ್ನು ಕಟ್ಟಿಹಾಕಿದ್ದ ಸರಪಳಿಯನ್ನು ಎಳೆಯುವ ಚಿರತೆ ಕ್ಷಣಮಾತ್ರದಲ್ಲಿ ಅದನ್ನು ಕೊಂದುಬಿಡುತ್ತದೆ.

ಮುಂಬೈನ ದಿಂಡೋಶಿ ಪ್ರದೇಶದಲ್ಲಿ ಇತ್ತೀಚೆಗೆ ಗಂಡು ಚಿರತೆಯೊಂದು ಕಾಣಿಸಿಕೊಂಡಿದ್ದು, ಅದನ್ನು ಹಿಡಿದು ಸಂಜಯ್ ಗಾಂಧಿ ರಾಷ್ಟ್ರೀಯ ಅಭಯಾರಣ್ಯಕ್ಕೆ ಬಿಡುಗಡೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read