BREAKING : ಬೆಂಗಳೂರಿನ ಜಿಗಣಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ; ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ.!

ಬೆಂಗಳೂರು : ಬೆಂಗಳೂರಿನ ಅನೇಕಲ್’ನ ಜಿಗಣಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.

ಅನೇಕಲ್ ನ ಜಿಗಣಿ ಮಾರ್ಗದ ಲೇಔಟ್ ನಲ್ಲಿ ಚಿರತೆ ಓಡಾಡಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸರೆಯಾಗಿದೆ. ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಬೋನ್ ಇಟ್ಟು ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕೆರೆಪಾಳ್ಯದ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು, ಈ ಬೆನ್ನಲ್ಲೇ ಜಿಗಣಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ನೆಲಮಂಗಲದಲ್ಲಿ ಇತ್ತೀಚೆಗಷ್ಟೇ 3 ಚಿರತೆಗಳನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದರು. ಈ ಹಿಂದೆ ಕಂಬಾಳು, ಗೊಲ್ಲರಹಟ್ಟಿಯಲ್ಲಿ 3 ಚಿರತೆ ಕಾಣಿಸಿಕೊಂಡಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read