ಮಕ್ಕಳು ಇಷ್ಟಪಟ್ಟು ತಿನ್ನುವ ‘ಲೆಮನ್ ಕುಕ್ಕಿಸ್’

ಕುಕ್ಕೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಈಗಂತೂ ಶಾಲೆಗಳಿಗೆ ರಜೆ. ದಿನಾ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು ಒಮ್ಮೆ ಅವರಿಗೆ ಮಾಡಿಕೊಡಿ.

ಬೇಕಾಗುವ ಸಾಮಗ್ರಿಗಳು:

2 ಕಪ್- ಮೈದಾ, 1 ಟೀ ಸ್ಪೂನ್- ಬೇಕಿಂಗ್ ಪೌಡರ್, ¼ ಟೀ ಸ್ಪೂನ್- ಬೇಕಿಂಗ್ ಸೋಡಾ, 8 ಟೇಬಲ್ ಸ್ಪೂನ್- ಬೆಣ್ಣೆ, 1 ಕಪ್-ಸಕ್ಕರೆ ಪುಡಿ, ಕ್ರೀಂ ಚೀಸ್-5 ಪೀಸ್, 1 ಮೊಟ್ಟೆ, 2 ಟೇಬಲ್ ಸ್ಪೂನ್-ಲಿಂಬೆಹಣ್ಣಿನ ರಸ, ¼ ಟೀ ಸ್ಪೂನ್- ವೆನಿಲ್ಲಾ ಎಸೆನ್ಸ್, 5 ಹನಿ-ಹಳದಿ ಫುಡ್ ಕಲರ್,

ಮಾಡುವ ವಿಧಾನ:

ಒಂದು ಬೌಲ್ ಗೆ ಮೈದಾ, ಬೇಕಿಂಗ್ ಪೌಡರ್ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಬೌಲ್ ಗೆ ಬೆಣ್ಣೆ, ಕ್ರೀಂ ಚೀಸ್, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ಮೊಟ್ಟೆ ಒಡೆದು ಹಾಕಿ ಹಾಗೇ ಲಿಂಬೆಹಣ್ಣಿನ ರಸ, ವೆನಿಲ್ಲಾ ಎಸೆನ್ಸ್, ಫುಡ್ ಕಲರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಮೈದಾ ಅನ್ನು ಇದಕ್ಕೆ ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ. ಈ ಮಿಶ್ರಣದ ಬೌಲ್ ಗೆ ಒಂದು ಪ್ಲಾಸ್ಟಿಕ್ ಕವರ್ ಸುತ್ತಿ 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ನಂತರ ಒವನ್ ಅನ್ನು ಫ್ರಿ ಹೀಟ್ ಮಾಡಿಕೊಂಡು ಈ ಕುಕ್ಕೀಸ್ ಮಿಶ್ರಣದಿಂದ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆ ರೀತಿ ಕಟ್ಟಿ ನಿಧಾನಕ್ಕೆ ಒತ್ತಿ. ಬೇಕಿಂಗ್ ಟ್ರೆ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read