ಜಾರ್ಖಂಡ್‌ನಲ್ಲಿ ಮೊಬೈಲ್ ಕಳ್ಳತನದ ಆರೋಪದ ಮೇಲೆ ಮಹಿಳೆಯೊಬ್ಬಳ ಕೈ ಕಾಲು ಕಟ್ಟಿ ಪೊಲೀಸರು ಎಳೆದೊಯ್ದಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ ಪ್ರಕರಣದಲ್ಲಿ ಮೂವರು ಮಹಿಳಾ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಘಟನೆ ಸಂಬಂಧ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್‌ಐ) ಸೇರಿದಂತೆ ಮೂವರು ಮಹಿಳಾ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಬೊಕಾರೊ ಎಸ್‌ಪಿ ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.
ವೈರಲ್ ದೃಶ್ಯದಲ್ಲಿ ಇಬ್ಬರು ಮಹಿಳಾ ಪೊಲೀಸರು ಆರೋಪಿ ಮಹಿಳೆಯ ತೋಳುಗಳನ್ನು ಹಿಡಿದಿದ್ದರೆ, ಮತ್ತೊಬ್ಬ ಮಹಿಳಾ ಪೊಲೀಸ್ ಆರೋಪಿಯ ಕಾಲುಗಳಿಗೆ ಹಗ್ಗ ಕಟ್ಟಿ ಎಳೆದೊಯ್ದಿದ್ದಾರೆ.
ಮೊಬೈಲ್ ಫೋನ್ ಕಳ್ಳತನದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಪತಿಯನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿತ್ತು. ಬಳಿಕ ಮಹಿಳೆಯನ್ನು ಚಾಸ್ ಮಹಿಳಾ ಠಾಣೆಗೆ ವರ್ಗಾವಣೆ ಮಾಡುವಾಗ ಆಕೆ ನೀರು ಕೇಳುವ ನೆಪದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಮಹಿಳಾ ಸಿಬ್ಬಂದಿ ಬೆನ್ನಟ್ಟಿದಾಗ ಆಕೆ ಎತ್ತರದ ಗೋಡೆಯನ್ನು ಹಾರುವಾಗ ಗಾಯಗೊಂಡಳು. ನಂತರ ಅವರು ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
https://twitter.com/sohansingh05/status/1715576449539961256?ref_src=twsrc%5Etfw%7Ctwcamp%5Etweetembed%7Ctwterm%5E1715576449539961256%7Ctwgr%5E3c116f038206da01d325a6f09db1e641c8ce2215%7Ctwcon%5Es1_&ref_url=https%3A%2F%2Fwww.latestly.com%2Fsocially%2Findia%2Fnews%2Fjharkhand-cops-tie-thiefs-legs-drag-her-back-to-police-station-after-she-flees-custody-in-bokaro-video-surfaces-5504787.html