ಪಾಕಿಸ್ತಾನಿ ಕ್ರಿಕೆಟಿಗ ಶಾನವಾಜ್ ದಹಾನಿ ಅವರು ತಂಡದ ಬೌಲಿಂಗ್ ಕೋಚ್ ಶಾನ್ ಟೈಟ್ ಬಗ್ಗೆ ಮಾಡಿರುವ ಟ್ವೀಟ್ ಅಪಾರ್ಥಕ್ಕೆ ಒಳಗಾಗಿ ಅಭಿಮಾನಿಗಳಿಗೆ ಭಯಾನಕ ಶಾಕ್ ನೀಡಿತು.
ಜಿಯೋ ಸೂಪರ್ ವರದಿಯ ಪ್ರಕಾರ ಟೈಟ್ ಅವರ ಒಪ್ಪಂದವು ಮುಂದಿನ ತಿಂಗಳು ಮುಕ್ತಾಯಗೊಳ್ಳುತ್ತದೆ ಮತ್ತು ಅವರು ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಯಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಒಂದು ದಿನದ ಸರಣಿಯ ಮುಕ್ತಾಯದ ನಂತರ, ದಹಾನಿ ಅವರು ಟೈಟ್ ಅವರೊಂದಿಗಿನ ತಮ್ಮ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದರು. “ನಗುವನ್ನು ತಂದ ಸ್ನೇಹಿತ, ನಿನ್ನೆ ರಾತ್ರಿ ಕಣ್ಣೀರಿನೊಂದಿಗೆ ಹೊರಟುಹೋದನು. #ShaunTait”. ಭಾರವಾದ ಹೃದಯದೊಂದಿಗೆ ಎಂದು ಬರೆದು ಅಳುವ ಎಮೋಜಿ ಹಾಕಿಕೊಂಡಿದ್ದರು. ಇದನ್ನು ನೋಡಿದ ಬಳಕೆದಾರರು ಟೈಟ್ ನಿಧನರಾದರು ಎಂದು ಭಾವಿಸಿದರು.
“ಸರಣಿ ಮುಗಿದಿದೆ. ಭಾರವಾದ ಹೃದಯದಿಂದ ಪಾಕಿಸ್ತಾನವನ್ನು ತೊರೆಯುತ್ತಿದ್ದೇನೆ” ಎಂದು ಟೈಟ್ ಟ್ವೀಟ್ ಮಾಡಿದ್ದಾರೆ. ಅವರ ಅನೇಕ ಅಭಿಮಾನಿಗಳು ದಹಾನಿಯ ಟ್ವೀಟ್ ಅನ್ನು ಅಪಾರ್ಥ ಮಾಡಿಕೊಂಡರೂ ಟೈಟ್ ಅವರೇ ಅದನ್ನು ಉಲ್ಲೇಖಿಸಿ-ಟ್ವೀಟ್ ಮಾಡಿದ್ದಾರೆ ಮತ್ತು “ನಾನು ನಿಮ್ಮೆಲ್ಲರನ್ನೂ ಕಳೆದುಕೊಳ್ಳುತ್ತೇನೆ” ಎಂದು ಬರೆದಿದ್ದಾರೆ. ಅವರು ದಹಾನಿ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
“ಪಾಕಿಸ್ತಾನವನ್ನು ತೊರೆಯುವ ಮೊದಲು ಡಾನ್ @ ಶಾನವಾಜ್ ದಹಾನಿ ಅವರೊಂದಿಗೆ ಕೊನೆಯ ಸೆಲ್ಫಿ” ಎಂದು ಶೀರ್ಷಿಕೆ ನೀಡಿದ್ದಾರೆ. ಇದನ್ನು ನೋಡಿದ ಮೇಲೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
https://twitter.com/ShahnawazDahani/status/1614110385107247106?ref_src=twsrc%5Etfw%7Ctwcamp%5Etweetembed%7Ctwterm%5E1614110385107247106%7Ctwgr%5Eeda7f98452bbfd86618c725184c24d
https://twitter.com/AaliHasan10/status/1614111074932097026?ref_src=twsrc%5Etfw%7Ctwcamp%5Etweetembed%7Ctwterm%5E1614127161786466308%7Ctwgr%5Eeda7f98452bbfd86618c725184c24d9632ed5678%7Ctwcon%5Es2_&ref_url=https%3A%2F%2Fwww.news18.com%2Fbuzz%2Fleft-with-tears-shahnawaz-dahanis-farewell-tweet-for-shaun-tait-gives-fans-heart-attack-6832273.html
https://twitter.com/sayam_ahmad_/status/1614166387794259969?ref_src=twsrc%5Etfw%7Ctwcamp%5Etweetembed%7Ctwterm%5E1614166387794259969%7Ctwgr%5Eeda7f98452bbfd86618c725184c24d9632ed5678%7Ctwcon%5Es1_&ref_url=https%3A%2F%2Fwww.news18.com%2Fbuzz%2Fleft-with-tears-shahnawaz-dahanis-farewell-tweet-for-shaun-tait-gives-fans-heart-attack-6832273.html