‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು’ : ಶಾಸಕ ಯತ್ನಾಳ್ ಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಮಾಡಿರುವ ಆರೋಪದ ಹಿನ್ನೆಲೆ ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.

‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು’ ಎಂದು ಶಾಸಕ ಯತ್ನಾಳ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
“ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದುಶಿಸುವುದಕ್ಕೆ ಚಾಚಿ ಕೊಂಡಿರುವಂತ ನಾಲಿಗೆ“ ದಾಸರ ಈ ಸಾಲುಗಳು ಬಿಜೆಪಿಯಲ್ಲಿ ಮನ್ನಣೆ ಸಿಗದೆ ಮತಿಭ್ರಮಣೆಗೊಂಡವರಂತೆ ವರ್ತಿಸುತ್ತಾ, ಭೂಮಿಗೆ ಭಾರವಾಗಿ ಬದುಕುತ್ತಿರುವ ಬಸನಗೌಡ ಪಾಟೀಲ್

ಅವರಿಗೆ ಅರ್ಪಣೆ. ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್ ಹಾಶ್ಮಿಯವರಿಗೆ ಐಸಿಸ್ ನಂಟಿದೆ ಎಂದು ಹುರುಳಿಲ್ಲದ ಆರೋಪ ಮಾಡಿದ ಅತೃಪ್ತ ಆತ್ಮ ದಂತಿರುವ ಯತ್ನಾಳ್ ಹಾಗೂ ಬಿಜೆಪಿ ಹಾಶ್ಮಿಯವರ ಸಾಮಾಜಿಕ ಜಾಲತಾಣಗಳಲ್ಲಿದ್ದ ಫೋಟೋಗಳನ್ನು ಎತ್ತಿ ಇತರ ಮುಸ್ಲಿಂ ಧಾರ್ಮಿಕ ನಾಯಕರನ್ನು ಐಸಿಸ್ ನವರೆಂದು ಬಿಂಬಿಸಲು ಹೊರಟಿದ್ದಾರೆ .

ಯತ್ನಾಳ್ ಅವರೇ, ಇದೇ ಹಾಶ್ಮಿಯಾವರೊಂದಿಗೆ ನಿಮ್ಮ ಹೊಸ ಬ್ರದರ್ ಕೂಡ ಜಾತ್ಯತೀತತೆಯ ಪೋಷಕು ತೊಟ್ಟಿದ್ದಾಗ ಫೋಟೋ ತೆಗೆದುಕೊಂಡಿದ್ದಾರೆ, ಈಗ ಕುಮಾರಸ್ವಾಮಿಯವರಿಗೂ ಐಸಿಸ್ ಪಟ್ಟ ಕಟ್ಟುತ್ತೀರಾ? ಎಂದು ಶಾಸಕ ಯತ್ನಾಳ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

https://twitter.com/INCKarnataka/status/1732683819399139527?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read