ವಾಟ್ಸಾಪ್ ನಿಂದ ಮಹತ್ವದ ಫೀಚರ್ ಪರಿಚಯಿಸಲಾಗಿದ್ದು, ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಫೋನ್ ಗಳಲ್ಲಿ ಬಳಸಲು ಅವಕಾಶ ನೀಡಲಾಗಿದೆ.
ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಈ ಮೂಲಕ ಹೊಸ ಫೀಚರ್ ಪರಿಚಯಿಸಿದೆ. ಮೂಲ ಫೋನ್ ಗಳಲ್ಲಿ ಲಾಗ್ ಔಟ್ ಆಗದೆ ಡೆಸ್ಕ್ ಟಾಪ್ ಮತ್ತು ಲ್ಯಾಪ್ಟಾಪ್ ಗಳಲ್ಲಿ ಬಳಕೆ ಮಾಡುವ ರೀತಿಯಲ್ಲಿಯೇ ಇನ್ನು ಮುಂದೆ ಹಲವು ಮೊಬೈಲ್ ಗಳಲ್ಲಿಯೂ ವಾಟ್ಸಾಪ್ ಬಳಸಬಹುದಾಗಿದೆ.
ಪ್ರಪಂಚದ ಯಾವ ಭಾಗದಿಂದಲಾದರೂ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆ ರೂಪಿಸಿದ್ದ ವಾಟ್ಸಾಪ್ ಅದನ್ನು ಮತ್ತಷ್ಟು ವಿಸ್ತರಿಸಿ ಹಲವು ಮೊಬೈಲ್ ಗಳಲ್ಲಿಯೂ ಒಂದೇ ಖಾತೆ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.
ವಾಟ್ಸಾಪ್ ಸೆಟ್ಟಿಂಗ್ ನಲ್ಲಿ ಮೋರ್ ಆಪ್ಷನ್ ತೆರೆದು ಲಿಂಕ್ಡ್ ಡಿವೈಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಲಿಂಕ್ಡ್ ಎ ಡಿವೈಸ್ ಆಯ್ಕೆ ಬಳಸಿಕೊಂಡು ಹೊಸ ಫೋನ್ ಕ್ಯೂಆರ್ ಕೋಡ್ ಅನ್ನು ಮೂಲ ಫೋನ್ ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ವಾಟ್ಸಾಪ್ ಖಾತೆ ಲಿಂಕ್ ಮಾಡಬಹುದಾಗಿದೆ. ಇದೇ ರೀತಿ ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಫೋನ್ ಗಳಲ್ಲಿ ಬಳಸಬಹುದಾಗಿದೆ.
WhatsApp ಅಂತಿಮವಾಗಿ ಒಂದಕ್ಕಿಂತ ಹೆಚ್ಚು ಫೋನ್‌ಗಳಿಗೆ ಬಹು-ಸಾಧನ ಲಾಗಿನ್ ಬೆಂಬಲವನ್ನು ಹೊರತರುತ್ತಿದೆ. ಇಂದಿನಿಂದ, ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ WhatsApp ಖಾತೆಗೆ ಲಾಗ್ ಇನ್ ಮಾಡಬಹುದು” ಎಂದು ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಮುಂಬರುವ ವಾರಗಳಲ್ಲಿ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಹೊರತರಲಿದೆ ಎಂದು WhatsApp ಹೇಳಿದೆ. 2 ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ WhatsApp ಅತ್ಯಂತ ದೊಡ್ಡ ಸಂದೇಶ ಸೇವೆಗಳಲ್ಲಿ ಒಂದಾಗಿದೆ.