
ಕೋಲಾರ: ಟೊಮೆಟೊ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ 23 ರೂಪಾಯಿಗೆ ಇಳಿಕೆಯಾಗಿದೆ.
15 ಕೆಜಿ ನಾಟಿ ಟೊಮೆಟೊ ಬಾಕ್ಸ್ ಸರಾಸರಿ 350 ರೂ.ಗೆ ಮಾರಾಟವಾಗಿದ್ದು, ಎರಡು ತಿಂಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹರಾಜಾಗಿದೆ. ಟೊಮೆಟೊ ಮಾರಾಟ ಮಾಡಿದ ರೈತರಿಗೆ ಕೆಜಿಗೆ ಸರಾಸರಿ 23 ರೂಪಾಯಿ ದರ ಸಿಕ್ಕಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಬಹುತೇಕವಾಗಿ ಇದೇ ದರ ಇದೆ. ಕಡಿಮೆ ಗುಣಮಟ್ಟದ 15 ಕೆಜಿ ಟೊಮೆಟೊ ಬಾಕ್ಸ್ 110 ರೂಪಾಯಿಗೆ ಮಾರಾಟವಾಗಿದೆ. ಜುಲೈ 31 ರಂದು 2700 ರೂಪಾಯಿಗೆ ಮಾರಾಟವಾಗಿದ್ದ ಟೊಮೆಟೊ ಸಾರ್ವಕಾಲಿಕ ದಾಖಲೆ ಬರೆದಿತ್ತು. ಈಗ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿದ್ದು ದರ ಇಳಿಕೆಯಾಗಿದೆ.