ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಏರು ಗತಿಯಲ್ಲಿರುವ ಅಗತ್ಯ ವಸ್ತುಗಳ ಬೆಲೆ ಮತ್ತೆ ದುಬಾರಿಯಾಗಿದೆ.
ತರಕಾರಿ ಬೆಲೆ ಏರಿಕೆಯ ನಂತರ ಬೆಳೆ ಅಕ್ಕಿ ಬಲು ದುಬಾರಿಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ ಮತ್ತಿತರ ಬೇಳೆ ಕಾಳುಗಳ ದರ 30 ರೂ.ವರೆಗೂ ಹೆಚ್ಚಳವಾಗಿದ್ದು, ಜನ ಕಂಗಾಲಾಗಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಬೇಳೆಕಾಳುಗಳ ದರ 20 ರಿಂದ 30 ರೂ. ರವರೆಗೆ ಹೆಚ್ಚಳವಾಗಿದೆ. ತೊಗರಿ ಬೇಳೆ 110 ರಿಂದ 160 ರೂ., ಉದ್ದಿನ ಬೇಳೆ 110 ರಿಂದ 135 ರೂ., ಹೆಸರುಬೇಳೆ 120 ರಿಂದ 140 ರೂ.,, ಜೀರಿಗೆ 350 ರಿಂದ 600 ರೂ.,, ಮೆಣಸಿನ ಪುಡಿ 186 ರಿಂದ 400 ರೂ., ದನಿಯಾ ಪುಡಿ 150 ರಿಂದ 218 ರೂ.,, ಕಾಳುಮೆಣಸಿನ ಪುಡಿ 380 ರೂ. ನಿಂದ 500 ರೂ., ಬ್ಯಾಡಗಿ ಮೆಣಸು 330 ರಿಂದ 850 ರೂ.,, ವರೆಗೂ ಹೆಚ್ಚಳವಾಗಿದೆ. ಅಕ್ಕಿ ದರ 10 -20 ರೂ. ವರೆಗೂ ಹೆಚ್ಚಳವಾಗಿದೆ. ಸೋನಾ ಮಸೂರಿ, ಆರ್.ಎನ್.ಆರ್. ಸ್ಟೀಮ್, ಬುಲೆಟ್ ರೈಸ್ ಮೊದಲಾದ ಅಕ್ಕಿ ದರ ಹೆಚ್ಚಳವಾಗಿದೆ. ಕೆಲವೆಡೆ ಟೊಮೆಟೊ ದರ ಶತಕದ ಸನಿಹದಲ್ಲಿದೆ.