alex Certify ವಿದ್ಯುತ್ ದರ ಏರಿಕೆ ಶಾಕ್: ಈ ತಿಂಗಳ ವಿದ್ಯುತ್ ಬಳಕೆ ಯೂನಿಟ್ ಗೆ 85 ಪೈಸೆ ಹೆಚ್ಚು ಶುಲ್ಕ: ಬೆಸ್ಕಾಂ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ದರ ಏರಿಕೆ ಶಾಕ್: ಈ ತಿಂಗಳ ವಿದ್ಯುತ್ ಬಳಕೆ ಯೂನಿಟ್ ಗೆ 85 ಪೈಸೆ ಹೆಚ್ಚು ಶುಲ್ಕ: ಬೆಸ್ಕಾಂ ಆದೇಶ

ಬೆಂಗಳೂರು: ಡಿಸೆಂಬರ್ ವಿದ್ಯುತ್ ಬಿಲ್ ನಲ್ಲಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ 35 ಪೈಸೆ ವಿಧಿಸಲಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ -ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಶುಲ್ಕದ ಜೊತೆಗೆ ಡಿಸೆಂಬರ್ ಬಿಲ್ ನಲ್ಲಿ ಬರುವಂತೆ ನವೆಂಬರ್ ತಿಂಗಳ ಬಳಕೆಯ ವಿದ್ಯುತ್ ಮೇಲೆ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿಯಾಗಿ ಇಂಧನ ಹೊಂದಾಣಿಕೆ ವೆಚ್ಚ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ,

ಕಳೆದ ಜೂನ್ ನಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ ಹೆಚ್ಚಳ ಮಾಡಲಾಗಿದ್ದ 50 ಪೈಸೆ ಶುಲ್ಕದೊಂದಿಗೆ ನವೆಂಬರ್ ತಿಂಗಳಿಗೆ ಸೀಮಿತವಾಗಿ 35 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಹೀಗಾಗಿ ಪ್ರತಿ ಯೂನಿಟ್ ಗೆ ಹೆಚ್ಚುವರಿಯಾಗಿ 85 ಪೈಸೆ ಶುಲ್ಕ ನವೆಂಬರ್ ತಿಂಗಳ ವಿದ್ಯುತ್ ಬಳಕೆಗೆ ವಸೂಲಿ ಮಾಡಲಾಗುವುದು.

ಅಕ್ಟೋಬರ್ ತಿಂಗಳ ಬಳಕೆಗೆ 1.01 ರೂಪಾಯಿ ನಿಗದಿ ಮಾಡಲಾಗಿತ್ತು. ವಿದ್ಯುತ್ ಕೊರತೆಯ ಕಾರಣ ಖರೀದಿ ಪ್ರಮಾಣ ಹೆಚ್ಚಾಗಿದ್ದರಿಂದ ಇಂಧನ ಹೊಂದಾಣಿಕೆ ವೆಚ್ಚ ಹೆಚ್ಚಾಗುವ ಆತಂಕ ಉಂಟಾಗಿತ್ತು. ಆದರೆ, ಕಳೆದ ತಿಂಗಳು ಎಫ್‌ಎಸಿಗಿಂತ 0.16 ಪೈಸೆ ಕಡಿಮೆ ಆಗಿದೆ. ನವೆಂಬರ್ ತಿಂಗಳ ವಿದ್ಯುತ್ ಬಳಕೆಯ ಮೇಲೆ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಲಾಗುವುದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...