ಕರಾವಳಿ ಪ್ರದೇಶದ ಜನರ ಪ್ರಮುಖ ಆಹಾರವಾದ ಕುಚ್ಚಲಕ್ಕಿ ದರ ಬಾರಿ ಏರಿಕೆ ಕಂಡಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಕ್ವಿಂಟಾಲ್ ಕುಚ್ಚಲಕ್ಕಿ ದರ 1000 ರೂ.ನಷ್ಟು ಹೆಚ್ಚಳವಾಗಿದೆ.
2022ರ ಡಿಸೆಂಬರ್ ನಲ್ಲಿ ಒಂದು ಕ್ವಿಂಟಾಲ್ ಕುಚ್ಚಲಕ್ಕಿ ದರ 3200 ರೂ.ನಿಂದ 3300 ರೂ.ವರೆಗೆ ಇತ್ತು. 2023ರ ಮಾರ್ಚ್ -ಏಪ್ರಿಲ್ ನಲ್ಲಿ ಭಾರಿ ಏರಿಕೆ ಖಂಡ ಕುಚಲಕ್ಕಿ ದರ ಕ್ವಿಂಟಾಲ್ ಗೆ 4,200 ರೂ.ವರೆಗೂ ತಲುಪಿದೆ. 1000 ರೂ.ನಷ್ಟು ದರ ಏರಿಕೆ ಕಂಡಿದ್ದು, ರಾವಳಿ ಭಾಗದ ಜನರಿಗೆ ತತ್ತರಿಸಿ ಹೋಗಿದ್ದಾರೆ.
ಕರಾವಳಿ ಭಾಗದಲ್ಲಿ ದೈನಂದಿನ ಊಟಕ್ಕೆ ಹೆಚ್ಚಾಗಿ ಕುಚ್ಚಲಕ್ಕಿ ಬಳಸುತ್ತಾರೆ. ಕ್ವಿಂಟಾಲ್ ಗೆ 1 ಸಾವಿರ ರೂ.ನಷ್ಟು ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಸಂಕಷ್ಟ ತಂದಿಟ್ಟಿದೆ. ಸರ್ಕಾರ ಅಕ್ಕಿ ಬೆಲೆ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜನಸಾಮಾನ್ಯರು ಒತ್ತಾಯಿಸಿದ್ದಾರೆ.